ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ.

ಮಂಡ್ಯದ ಸೊಸೆಯಾಗಿರುವ ಅವಿವಾ ಇದೀಗ ಮದುವೆಯ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವಿವಾ ಶೇರ್ ಮಾಡಿರುವ ಫೋಟೋಗಳು ಒಂದಕ್ಕಿಂತ ಒಂದು ಸುಂದರವಾಗಿ ಮೂಡಿ ಬಂದಿವೆ.
ಜೂನ್ 5ರಂದು ಬೆಂಗಳೂರಿನ ಮಾಣಿಕ್ಯ-ಚಾಮರ ವಜ್ರದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಹಸೆಮಣೆ ಏರಿದ್ದಾರೆ. ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಾಕಷ್ಟು ಗಣ್ಯರು ಮದುವೆಗೆ ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು.
ಅಭಿಷೇಕ್ ಅಂಬರೀಶ್ ಕೈ ಹಿಡಿದಿರುವ ಅವಿವಾ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ್ದಾರೆ. ತಂದೆಯಂತೆಯೇ ಮಗಳು ಕೂಡ ಫ್ಯಾಷನ್ ಉದ್ಯಮದಲ್ಲಿ ಖ್ಯಾತಿ ಘಳಿಸಿದ್ದು ಅವಿವಾ ಕೋಟಿ ಕೋಟಿಯ ಒಡತಿ.
ಎರಡು ವರ್ಷಗಳ ಡೇಟಿಂಗ್ ನಲ್ಲಿದ್ದ ಅಭಿಷೇಕ್ ಹಾಗೂ ಅವಿವಾ ಸದ್ಯ ಕುಟುಂಬಸ್ಥರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಇತ್ತೀಚೆಗೆ ಮಂಡ್ಯದಲ್ಲಿ ಅದ್ದೂರಿಯಾಗಿ ಭೀಗರೂಟ ಆಯೋಜಿಸಿತ್ತು.
ಮದುವೆ ಬಳಿಕ ಅವಿವಾ ಪತಿ ಅಭಿಷೇಕ್ಗೆ BMW ಕಾರನ್ನು ಗಿಫ್ಟ್ ಆಗಿ ನೀಡಿದ್ದರು. ಅವಿವಾ ಉಡುಗೊರೆಯಾಗಿ ನೀಡಿರುವ ಕಾರಿನ ಬೆಲೆ ಬರೋಬ್ಬರಿ ಒಂದೂವರೆ ಕೋಟಿ ಇದೆ.
ಅಭಿ-ಅವಿವಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ಮಂದಿಯ ಸಮಾಗಮವಾಗಿತ್ತು. ನಟ ಯಶ್, ಶಿವಣ್ಣ, ಸುಮಲತಾ, ರಮ್ಯಾ ಕೃಷ್ಣ ಸೇರಿದಂತೆ ಅನೇಕ ನಟ-ನಟಿಯರು ಕುಳಿದು ಕುಪ್ಪಳಿಸಿದ್ರು.
