ಮಹದೇವಪುರ: ಪ್ರೀತಿಸಿ ಎರಡು ತಿಂಗಳ ಹಿಂದೆಷ್ಟೆ ಮದುವೆಯಾಗಿದ್ದರು.. ಮದುವೆಯಾಗಿ ಎರಡು ತಿಂಗಳೇ ವರನ ಕಡೆಯವರು ವಧುವಿಗೆ ವರದಕ್ಷಿಣೆ ಕಿರುಕುಳ ನೀಡಿದ್ದು, ಅನುಮಾನಾಸ್ಪದವಾಗಿ ಯುವತಿಯ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ವಿಭಾಗದ ಮಹದೇವಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಮುದ್ದಾಗಿ ಕಾಣುತ್ತಿರುವ ಜೋಡಿಯ ಹೆಸರು ಪ್ರವೀಣ್ ಮತ್ತು ಅನುಷಾ.. ಇವರಿಬ್ಬರೂ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ತಾಲೂಕಿನವರು.. ಎರಡು ತಿಂಗಳ ಹಿಂದೆ ಕುಟುಂಬದವರ ವಿರೋಧ ನಡುವೆಯೂ ಯುವತಿ ಪಕ್ಕದ ಊರಿನ ಪ್ರವೀಣ್ ನನ್ನು ಮದುವೆಯಾಗಿ ಮಹದೇವಪುರದ ಸಿಂಗಯ್ಯನಪಾಳ್ಯಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು..
ಕೆಲ ದಿನಗಳ ನಂತರ ಯುವತಿಯ ಪೋಷಕರು ನವ ದಂಪತಿಯನ್ನು ಕರೆಸಿ ಬುದ್ದಿವಾದ ಹೇಳಿ ಸುಖ ಸಂಸಾರದಿಂದ ಬಾಳುವಂತೆ ಆಶೀರ್ವದಿಸಿದ್ದರೂ.. ಆದ್ರೆ ಹುಡುಗ ಕುಟುಂಬದವರು ಯುವತಿಗೆ ಆಸ್ತಿ ಮತ್ತು ವರದಕ್ಷಿಣೆ ಕಿರುಕುಳ ನೀಡಿ, ಹತ್ಯೆ ಮಾಡಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.. ಇನ್ನೂ ಯುವತಿ ಸಾವಿಗೆ ಅತ್ತೆ ನಾಗಮ್ಮ, ಸೋದರ ಮಾವ ರಾಜೇಶ್ ಹಾಗೂ ದೊಡ್ಡಪ್ಪ ತಿಮ್ಮೆಗೌಡನ ಮಗ ಮಹೇಶ್ ಕಾರಣವೆಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ..