ಬೆಂಗಳೂರು: ಹೆದ್ದಾರಿಯಲ್ಲಿ ಕಾರು ಅಪಘಾತ (Car Accident) ಮಾಡಿ ಯುವಕನೋರ್ವನನ್ನು ಕೊಲೆ ಮಾಡಿ ಹಂತಕರು ಎಸ್ಕೇಪ್ ಆದ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನಡೆದಿದೆ.
ಹೊಸಕೋಟೆ (Hoskote) ತಾಲೂಕಿನ ಗಂಗಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಭಾರ್ಗವ್ (24) ಕೊಲೆಯಾದ ಯುವಕ.
ಅನಂತ್ ಅಂಬಾನಿ ಅದ್ಧೂರಿ ವಿವಾಹಕ್ಕೆ ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆ ತಿಂಡಿಗಳ ಘಮ
ಈತ ಕೋಲಾರ ಮೂಲದವನಾಗಿದ್ದು, ತಡರಾತ್ರಿ ಕೋಲಾರದಿಂದ ಹೊಸಕೋಟೆ ಕಡೆಗೆ ಕಾರಿನಲ್ಲಿ ಬರುತ್ತಿದ್ದ. ಈ ವೇಳೆ ಹಂತಕರು ಕಾರು ಚೇಸ್ ಮಾಡಿ ಬ್ರೇಕ್ ಹಾಕಿದ್ದಾರೆ. ಪರಿಣಾಮ ಕಾರಿನ ಮುಂಭಾಗ ಹಂತಕರ ಕಾರಿಗೆ ಡಿಕ್ಕಿಯಾಗಿದೆ. ಇದೇ ನೆಪದಲ್ಲಿ ಗಲಾಟೆ ಮಾಡಿ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.