ಮೈಸೂರು: ನೀರಿಗೆ ಬಿದ್ದು ಕೆಟ್ಟುಹೋದ ಮೊಬೈಲ್ ಮತ್ತು ಅದರ ರಿಪೇರಿಗೆ ಹಣ ಇಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಯರಗನಹಳ್ಳಿಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮಹೇಂದ್ರ( 22) ಮೃತ ದುರ್ದೈವಿ ಯುವಕ.
ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರನ ಮೊಬೈಲ್ ನೀರಿನಲ್ಲಿ ಬಿದ್ದು ಕೆಟ್ಟುಹೋಗಿತ್ತು. ಆದರೆ ಆರ್ಥಿಕ ಸಮಸ್ಯೆಯಲ್ಲಿದ್ದ ಮಹೇಂದ್ರನಿಗೆ ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಮಾನಸಿಕವಾಗಿ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
