ಚಾಮರಾಜನಗರ : ಕಾವೇರಿ ನದಿಯಲ್ಲಿ ಯೋಗ ಮಾಡುತ್ತಲೇ ನುರಿತ ಈಜು ಹಾಗೂ ಯೋಗಪಟು ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರದಲ್ಲಿ ಘಟನೆ ನಡೆದಿದೆ.
ಕೊಳ್ಳೇಗಾಲದ ನಾಗರಾಜು(78) ಮೃತ ದುರ್ದೈವಿಯಾಗಿದ್ದು, ವಿಪ್ರ ಬಾಂಧವರ ಜೊತೆ ತೀರ್ಥಸ್ನಾನ ಮಾಡಲು ತೆರಳಿದ್ದರು. ಈಜುತ್ತಾ ಬಲುದೂರ ಸಾಗಿದ ಬಳಿಕವೂ ಹಿಂತಿರುಗದಿದ್ದಾಗ ನೀರಿನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ನೀರಿನಲ್ಲಿ ಯೋಗ ಸೇರಿ ವಿವಿಧ ಆಂಗಿಕ ಸಾಧನೆ ಮಾಡುವುದರಲ್ಲಿ ನಿಪುಣರಾಗಿದ್ದ ನಾಗರಾಜು ಈಜುವಾಗ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.