ಧಾರವಾಡ:- ಆರ್ಥಿಕ ಸಂಕಷ್ಟದಿಂದ ಜೀವನದಲ್ಲಿ ಜುಗುಪ್ಸೆ ಹಿನ್ನೆಲೆ ಮಹಿಳೆಯೋರ್ವರು ನೇಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ಧಾರವಾಡ ರಾಜನಗರದಲ್ಲಿ ಜರುಗಿದೆ.
ಸುಂದರವ್ವ ಗಂಬೇರ,ನೇಣು ಹಾಕಿಕೊಂಡ ಮಹಿಳೆ ಎನ್ನಲಾಗಿದೆ. ಮಾಡಿದ ಸಾಲ ತೀರಿಸದಕ್ಕೆ ಕಿರುಕುಳ ಆರೋಪ ಕೇಳಿಬಂದಿದೆ. ಮೃತ ಮಹಿಳೆ, ಸ್ವಸಹಾಯ ಸಂಘದಲ್ಲಿ ಮಾಡಿದ್ದ. ಜೊತೆಗೆ ತನ್ನಿಂದ ಹಣ ಪಡೆದವರು ವಾಪಸ ಕೊಡದ ಹಿನ್ನೆಲೆ ಸಂಕಷ್ಟಕ್ಕೊಳಗಾಗಿದ್ದಾಳೆ.
ಆರ್ಥಿಕವಾಗಿ ಸಂಕಷ್ಟ ಎದುರಾದ ಹಿನ್ನೆಲೆ ಅನೇಕರು ಮಹಿಳೆಯನ್ನು ನಿಂದಿಲಿದ್ದಾರೆ. ಜನರ ನಿಂದನೆ ಬಗ್ಗೆ ಮಹಿಳೆ ಡೆತ್ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾಳೆ. ನಿಧನದ ನಂತರ ಮೃತದೇಹ ಆಸ್ಪತ್ರೆಗೆ ಕೊಡಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಬಳಿ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲ. ಹೀಗಾಗಿ ನನ್ನ ದೇಹ ಆಸ್ಪತ್ರೆಗೆ ಕೊಡಿ ಎಂದು ಬರೆದಿದ್ದಾರೆ,
ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.