ತುಮಕೂರು:- ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ ಹೊಡೆದಿದ್ದು, ದುರಂತ ತಪ್ಪಿರುವ ಘಟನೆ ಪಾವಗಡ ತಾಲೂಕಿನ ಬುಗುಡೂರು ಗ್ರಾಮದಲ್ಲಿ ಜರುಗಿದೆ.
ಗೋಲ್ಡ್ ಪ್ರಿಯರ ಗಮನಕ್ಕೆ: 2025ರಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಾ? ಕಡಿಮೆ ಆಗುತ್ತಾ?
407 ವಾಹನ ಪಲ್ಟಿಯಾದ ಹಿನ್ನೆಲೆ 10ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿ.ಹೊಸಳ್ಳಿ ಗ್ರಾಮದ ಲಂಬಾಣಿ ತಾಣದ ಕಾರ್ಮಿಕರು ಗಾಯಾಳುಗಳು.
ಅವರು ತಿರುಮಣಿ ಗ್ರಾಮದಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ವಾಪಸ್ಸಾಗುತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳಿಗೆ ತುಮಕೂರು ಜಿಲ್ಲಾಸ್ಪತ್ರೆ ಹಾಗೂ ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.