ಸಮಯಪ್ರಜ್ಞೆ, ಧೈರ್ಯದಿಂದ ಸಾಕಷ್ಟು ಸಮಸ್ಯೆಗಳಿಂದ ಪಾರಾಗಬಹುದು ಎಂಬುದು ಸತ್ಯ. ಇದಕ್ಕೆ ಬೇಕಾದಷ್ಟು ಉದಾಹರಣೆಗಳೂ ಇವೆ ಪ್ರಾಣಿ, ಪಕ್ಷಿಗಳಲ್ಲೂ ಇಂತಹ ಜಾಣತನವನ್ನು ನೋಡಬಹುದು. ಇದಕ್ಕೆ ಸಾಕ್ಷಿಯಾದ ಸಾಕಷ್ಟು ದೃಶ್ಯಗಳನ್ನು ನೀವು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಹಲವು ಸಲ ನೋಡಿರಬಹುದು ಇದೀಗ ಅಂತಹದ್ದೇ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ.
ಇದು ಬಾತುಕೋಳಿಯೊಂದ ಹುಲಿಗೆ ಚಳ್ಳೆಹಣ್ಣು ತಿನ್ನಿಸುವ ದೃಶ್ಯ. ಪ್ರತಿ ಪ್ರಾಣಿಗಳ ಬೇಟೆಯ ವಿಧಾನ ಭಿನ್ನವಾಗಿರುತ್ತದೆ. ಪ್ರತಿ ಪ್ರಾಣಿಗಳು ಬೇಟೆಯಿಂದ ಪಾರಾಗುವ ಶೈಲಿಯೂ ಅಷ್ಟೇ ಭಿನ್ನವಾಗಿರುತ್ತದೆ. ಅಂತೆಯೇ ಬಾತುಕೋಳಿಗಳು ಕೂಡಾ ನೀರಿನಲ್ಲಿ ಮುಳುಗಿ ಪ್ರಾಣ ಉಳಿಸಿಕೊಳ್ಳುವಲ್ಲಿ ಸೈ ಎನಿಸಿಕೊಂಡಿವೆ. ಬಾತುಕೋಳಿಗಳ ಇಂತಹ ಜಾಣತನವನ್ನು ನೀವು ಸಾಕಷ್ಟು ಸಲ ನೋಡಿರಬಹುದು. ಇದೀಗ ಇದಕ್ಕೆ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದೆ.

