ಸಫಾರಿಗೆ ಹೋಗೋದಂದ್ರೆ ಮಕ್ಕಳು ಸೇರಿ ವಯಸ್ಸಾದವರಿಗೂ ಇಷ್ಟ. ಅದ್ರಲ್ಲೂ ಅನೇಕರಿಗೆ ಬಸ್‌ಗಿಂತ ಜೀಪ್‌ನಲ್ಲಿ ಸಫಾರಿಗೆ ಹೋಗೋ ಹುಚ್ಚು ಹೆಚ್ಚು. ಹಾಗೆ, ಸಫಾರಿಯಲ್ಲಿ ಹುಲಿ, ಸಿಂಹ, ಚಿರತೆ ಮುಂತಾದ ಕಾಡು ಪ್ರಾಣಿಗಳನ್ನು ನೋಡಲು ಅನೇಕರು ಇಷ್ಟಪಡುತ್ತಾರೆ. ಕೆಲಸ ಮಾಡಿ ಮಾಡಿ ಬೋರಾಗಿ ಒಂದು ದಿನ ರಿಲ್ಯಾಕ್ಸ್ ಆಗೋಕೂ ಇದು ಉತ್ತಮ ಐಡಿಯಾ ಅಲ್ವಾ. ಇದೇ ರೀತಿ, ಜೀಪ್‌ನಲ್ಲಿ ಸಫಾರಿಗೆ ಹೋದೋರಿಗೆ ಶಾಕ್ ಕಾದಿತ್ತು.
ನಾಲ್ಕು ಚಕ್ರದ ವಾಹನದಲ್ಲಿ ಸಫಾರಿ ರೈಡ್ ಮಾಡುತ್ತಿದ್ದ ಪ್ರವಾಸಿಗರ ಗುಂಪೊಂದು ರಾಷ್ಟ್ರೀಯ ಪ್ರಾಣಿ ಹುಲಿಯನ್ನು ವೀಕ್ಷಿಸುತ್ತಿರುವಾಗ ಮತ್ತು ಅದರ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದಾಗ ಕೋಪಗೊಂಡ ಹುಲಿ ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡಲು ಹೋಗಿದೆ. ವ್ಯಾಘ್ರನಿಗೆ ಯಾರ ಮೇಲೆ ಸಿಟ್ಟು ಬಂತೋ ಏನೋ ತನ್ನ ಜಾಗಕ್ಕೆ ಬಂದ ತಮ್ಮನ್ನು ಅಟ್ಟಾಡಿಸಿಕೊಂಡು ಬರುತ್ತೇನೋ ಎಂದು ಸಫಾರಿ ರೈಡ್ ಮಾಡುತ್ತಿದ್ದ ಪ್ರವಾಸಿಗರು ಗಾಬರಿಯಾಗಿದ್ರು ಎನ್ನಲಾಗಿದೆ.

Viral Video : `ಉರುಳಿ’ಗೆ ಸಿಲುಕದೆ ಆಹಾರ ಕದ್ದ ಇಲಿ : ಅಬ್ಬಾ! ಮೂಷಿಕದ ಬುದ್ಧಿವಂತಿಕೆಗೆ ನೆಟ್ಟಿಗರು ಫಿದಾ!
ಇನ್ನು, ಹುಲಿ ಪ್ರವಾಸಿಗರ ಮೇಲೆ ಎರಗಲು ಹೋದಾಗ ಸಫಾರಿ ವಾಹನದ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದಾರೆ. ಅಲ್ಲದೆ, ಆತುರಾತುರವಾಗಿ ವಾಹನವನ್ನು ಚಲಿಸಲು ಪ್ರಯತ್ನಿಸಿದ್ದು, ಕೋಪಗೊಂಡ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯಿಂದ ದೂರ ತೆಗೆದುಕೊಂಡು ಹೋಗಿದ್ದಾರೆ. ಹುಲಿ ಯಾರಿಗೂ ಹಾನಿ ಮಾಡದೆ ಮತ್ತೆ ಕಾಡಿಗೆ ಹೋದರೂ ಪ್ರವಾಸಿಗರು ಬೆಚ್ಚಿ ಬಿದ್ದಿದ್ದು, ಹಲವರು ಜೋರಾಗಿ ಕಿರುಚಿದ್ದಾರೆ.
