ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ದೊಡ್ಡ ಅನಾಹುತವೇ ತಪ್ಪಿದೆ. ಒಂದು ಕ್ಷಣ ಯಾಮಾರಿದ್ರೂ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿ ಹೋಗ್ಬಿಟ್ಟಿದೆ. ನಿಂತಿದ್ದ ಸಿಟಿ ಬಸ್ಗೆ ಹಿಂದಿನಿಂದ ಕಾರು ಗುದ್ದಿದ್ದು ಬೆಂಕಿ ಆವರಿಸಿತ್ತು.ಆದ್ರೆ ಬಸ್ ಡ್ರೈವರ್ ಜಾಣ್ಮೆಯಿಂದ 40 ಕ್ಕೂಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.ಹಾಗಾದ್ರೆ ಈ ಭೀಕರ ಆಕ್ಸಿಡೆಂಡ್ ಹೇಗೆ ನಡೆಯಿತು ಬನ್ನಿ ತೋರಿಸ್ತೀವಿ..
ಬೆಂಗಳೂರು ಇದು ರಾಜ್ಯದ ರಾಜಧಾನಿ.ನಿತ್ಯ ಒಂದು ಕೋಟಿಕ್ಕಿಂತ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತವೆ. ಟ್ರಾಫಿಕ್ ದಟ್ಟನೆ ನಡವೆಯೂ ಒಂದಲ್ಲ ಒಂದು ಆಕ್ಸಿಡೆಂಟ್ ಗಳು ನಡೆಯುತ್ತಲ್ಲೇ ಇರ್ತವೆ. ಯಾವಾಗಲೂ ನಗರದಲ್ಲಿ ಆಕ್ಸಿಡೆಂಟ್ ಗಳಲ್ಲಿ ಹೆಚ್ಚು ಸದ್ದು ಮಾಡೋದೆ ಈ ಬಿಎಂಟಿಸಿ ಬಸ್ ಗಳು. ಆದ್ರೆ ಯಾವಾಗಲೂ ನಗರದಲ್ಲಿ ಆಕ್ಸಿಡೆಂಟ್ ಗಳೇ ಮಾಡುತ್ತಿದ್ದ ,ಬಸ್ ಗೆನೇ ಕಾರುವೊಂದು, ಗುದ್ದಿ ಅವಾಂತರ ಸೃಷ್ಟಿ ಮಾಡಿದೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಹೌದು…ನಿಂತಿದ್ದ ಬಿಎಂಟಿಸಿ ಬಸ್ಗೆ ಕಾರ್ ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡಿದ್ದು ಕಾರು ಹೊತ್ತಿ ಉರಿದ ಘಟನೆ ನಾಯಂಡಹಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ನಿಂತಿದ್ದ ಬಿಎಂಟಿಸಿ ಬಸ್ಗೆ ವೇಗವಾಗಿ ಬಂದ ಐ20 ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ನಡುರಸ್ತೆಯಲ್ಲೇ ಬೆಂಕಿ ,ಕಾರು ಸುಟ್ಟು ಕರಕಲಾಗಿದೆ. ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುತ್ತಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಕಾರು ಬಸ್ಗೆ ಡಿಕ್ಕಿ ಹೊಡೆದು ಬೆಂಕಿ ತಗುಲಿದ್ದು ಕಾರು ಸಂಪೂರ್ಣ ಸುಟ್ಟು ಹೋಗಿದೆ. ಬಸ್ನ ಹಿಂದಿನ ಭಾಗ ಸ್ವಲ್ಪ ಬೆಂಕಿಗಾಹುತಿಯಾಗಿದೆ.
ವೇಗವಾಗಿ ಕಾರ್ ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಕಾರು ಚಾಲಕನಿಗೆ ಮೂಗಿನ ಬಳಿ ಕೊಂಚ ಗಾಯಗಳಾಗಿವೆ. ಉಳಿದಂತೆ ಬಸ್ ನಲ್ಲಿದ್ದ ಪ್ರಯಾಣಿಕರು ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಸಂಚರಿಸುವ ಬನಶಂಕರಿ ಡಿಪೋನ 26ರ ಮಾರ್ಗದ 401NY ಬಸ್ ಸಂಖ್ಯೆ F4968ರ ಬಸ್ ಇದಾಗಿದ್ದು ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಚಾಲಕ ಗೌರೀಶ್ ಬಿ, ನಿರ್ವಾಹಕ ಗಿರಿಧರ್ ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಚಂದ್ರಲೇಔಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಲು ನಿಲ್ಲಿಸಿದ್ದ ವೇಳೆ ಕಾರು ವೇಗವಾಗಿ ಬಂದು ಬಸ್ಗೆ ಗುದ್ದಿದೆ.
ಬಿಎಂಟಿಸಿ ಬಸ್ ಚಾಲಕ ಪ್ರಯಾಣಿಕರ ರಕ್ಷಣೆ ಮಾಡುವುದರ ಜೊತೆಗೆ ಬಿಎಂಟಿಸಿ ಬಸ್ ರಕ್ಷಣೆ ಸಹ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಂಕಿ ಹೊತ್ತಿದ್ದ ಕಾರು ಹಾಗೂ ಬಸ್ ಪರಸ್ಪರ ಸಿಕ್ಕಿ ಹಾಕಿಕೊಂಡಿದ್ದು ಅದನ್ನು ಬಿಡಿಸಲು ಬಸ್ ಚಾಲಕ ಪ್ರಯತ್ನ ಮಾಡಿದ್ದಾರೆ. ನೂರು ಮೀಟರ್ ಬಸ್ ಚಲಾಯಿಸಿ ಕಾರ್ನಿಂದ ಬಸ್ ಅನ್ನು ಕಾಪಾಡಿದ್ದಾರೆ. ಹೀಗಾಗಿ ಬಸ್ ಬೆಂಕಿಗಾಹುತಿಯಾಗುವುದು ತಪ್ಪಿದೆ. ಇಲ್ಲವಾದಲ್ಲಿ ನಡುರಸ್ತೆಯಲ್ಲಿ ಬಿಎಂಟಿಸಿ ಬಸ್ ಕೂಡ ಸುಟ್ಟು ಬಸ್ಮವಾಗುತ್ತಿತ್ತು. ಹೊತ್ತಿ ಉರಿಯುತ್ತಿರುವ ಬೆಂಕಿಯ ನಡುವೆಯೂ ಬಸ್ ಏರಿ ಬಸ್ ಚಲಾಯಿಸಿದ್ದಾರೆ.
ಸತತ ಒಂದೂವರೆ ನಿಮಿಷಗಳ ಹರಸಾಹಸದ ಬಳಿಕ ಡಿವೈಡರ್ ಹಾರಿಸಿ ಮತ್ತೊಂದು ರಸ್ತೆಗೆ ಚಲಾಯಿಸುವ ಮುಖಾಂತರ ಬಸನ್ನು ಕಾರಿನಿಂದ ಬಿಡಿಸುವಲ್ಲಿ ಚಾಲಕ ಗೌರೀಶ್ ಅವರು ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಬಿಎಂಟಿಸಿ ಡ್ರೈವರ್ಗಳೆಂದ್ರೆ ಯಮಾದೂತರೆನ್ನೋ ಕಳಕವಿದೆ. ಅವರು ನಿರಂತರ ಸುದ್ದಿಯಾಗೋದೇ ಈ ಆಕ್ಸಿಡೆಂಟ್, ಹಾಗೂ ಅನುಚಿತ ವರ್ತನೆಯಿಂದ.. ಹೀಗಾಒಗಿ ಬಿಎಂಟಿಸಿ ಕಿಲ್ಲರ್ ಬಿಎಂಟಿಸಿ ಅನ್ನೋ ಹಣೆಪಟ್ಟಿ ಇದೆ. ಆದ್ರೆ ಇವತ್ತು ಬಿಎಂಟಿಸಿ ಬಸ್ ಡ್ರೈವರ್ ಜಾಣ್ಮೆಯಿಂದ ದೊಡ್ಡ ದುರಂತವೇ ತಪ್ಪಿದೆ. ಯಾವಾದಕ್ಕೂ ನಗರದ ರಸ್ತೆಯಲ್ಲಿ ವಾಹನಗಳು ಓಡಿಸೋ ಮುನ್ನ ಎಚ್ಚರವಹಿಸಬೇಕಾಕಿದೆ.ಇಲ್ಲದ್ರೆ ಅಪಾಯ ಕಟ್ಟಿಟ್ಟಬುತ್ತಿ