ಕಲಬುರಗಿ :- ಜಿಲ್ಲೆಯ ಆಳಂದ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ 5ನೇ ತರಗತಿ ಓದುತ್ತಿರುವ 10 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನೇ ಲೈಂಗಿಕ ದೌರ್ಜನ್ಯ ಎಸಗುವ ಯತ್ನ ಮಾಡಿರುವ ಘಟನೆ ಜರುಗಿದೆ.
‘ನನ್ನ ಜೊತೆ ಮಲಗು ಇಲ್ಲಾಂದ್ರೆ ಸುಳ್ಳು ಕೇಸ್ ಹಾಕ್ತೀನಿ’: ನ್ಯಾಯ ಕೇಳಲು ಹೋದ ಮಹಿಳೆಗೆ CPI ಲೈಂಗಿಕ ದೌರ್ಜನ್ಯ!
ಘಟನೆ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆ ಅವಧಿ ಮುಗಿದ ಬಳಿಕ ವಿದ್ಯಾರ್ಥಿನಿಯನ್ನ ಕರೆಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಶಾಲಾ ಕೋಣೆಯಲ್ಲೆ ಶಿಕ್ಷಕ ಮಲ್ಲಿಕಾರ್ಜುನ ಕುಮಸಿ 5 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಸದ್ಯ ಕಾಮುಕನ ಹೆಡೆಮುರಿಕಟ್ಟಲಾಗಿದೆ.