ವಿಜಯಪುರ:- ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಎಚ್ಓಡಿ ಅಮಾನತ್ತಿಗೆ ಆಗ್ರಹಿಸಿ ಪ್ರೊಟೆಸ್ಟ್ ನಡೆಸಲಾಗಿದೆ.
ಕುಲಪತಿ ಪ್ರೋ ತುಳಸಿಮಾಲಾ ಅವರಿಗೆ ಲೈಂಗಿಕ ಕಿರುಕುಳಕ್ಕೆ ಒಳಾಗಿರುವ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಈ ದೂರು ಕುರಿತು ತನಿಖೆ ನಡೆಸಲು ಆಂತರಿಕ ದೂರು ಸಮೀತಿಗೆ ವಿಸಿ ಸೂಚನೆ ನೀಡಿದ್ದಾರೆ. ಈ ಹಿನ್ನಲೆ ಹಾಗೂ ಘಟನೆ ಖಂಡಿಸಿ ಇಂದು ಮಹಿಳಾ ವಿವಿ ಎದುರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಕಾರ್ಯಕರ್ತರು ಹೋರಾಟ ಮಾಡಿದರು.
ಮಹಿಳಾ ವಿವಿಯ ಮ್ಯಾನೇನ್ಮೆಂಟ್ ವಿಭಾಗದ ಪ್ರೋ ಮಲ್ಲಿಕಾರ್ಜುನ ಎನ್ಎಚ್ ವಿರುದ್ದ ಧಿಕ್ಕಾರ ಕೂಗಿದರು. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರೋ ಮಲ್ಲಿಕಾರ್ಜುನರನ್ನು ಸೇವೆಯಿಂದ ಅಮಾನತ್ತು ಮಾಡಬೇಕು. ಆಂತರಿಕ ದೂರು ಸಮಿತಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪಾರದರ್ಶಕವಾಗಿ ತನಿಖೆ ಮಾಡಬೇಕೆಂದು ಒತ್ತಾಯ ಮಾಡಿದರು.