ಬೆಂಗಳೂರು ;- ವೇಗವಾಗಿ ಬಂದ ಗೂಡ್ಸ್ ಆಟೋ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ಸಮೇತ ಗೂಡ್ಸ್ ಆಟೋ ನೇತಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ಸೆಕೆಂಡ್ ಸ್ಟೇಜ್ ನಲ್ಲಿ ನಡೆದಿದೆ. ಆಟೋ ಚಾಲಕ ಮರ ಭಾಗಿರುವುದನ್ನ ಗಮನಿಸದೆ ಬಂದ ವೇಳೆ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಮರಕ್ಕೆ ಡಿಕ್ಕಿ ಹೊಡೆದು ಸಿಲುಕಿದ್ದ ಗೂಡ್ಸ್ ಆಟೋ ತೆರವು ಮಾಡಲಾಗಿದೆ. ಈ ಹಿಂದೆಯೂ ಗೂಡ್ಸ್ ಆಟೋ ಇದೇ ರೀತಿಯ ಅಪಘಾತಕ್ಕೊಳಗಾಗಿತ್ತು. ಪದೇ ಪದೇ ಈ ರಸ್ತೆಯಲ್ಲಿ ಅಪಘಾತವಾಗುತ್ತಿರೋ ಹಿನ್ನೆಲೆ ಸ್ಥಳೀಯರು ಬೇಸರ ಹೊರ ಹಾಕಿದ್ದಾರೆ.

