ಬೆಂಗಳೂರು:- ನಗರದ ಹೊರವಲಯದಲ್ಲಿ ವಿದ್ಯುತ್ ತಂತಿ ತುಳಿದು ಕುರಿಗಾಯಿ ಸಾವನ್ನಪ್ಪಿದ ಘಟನೆ ಜರುಗಿದೆ.
ವಿದ್ಯುತ್ ತಂತಿಯಲ್ಲಿ ಪ್ರವಹಿಸುತ್ತಿದ್ದ ಶಾಕ್ ನಿಂದ 65 ವರ್ಷದ ಶಿವಣ್ಣ ಸಾವನ್ನಪ್ಪಿದ್ದಾರೆ. ಬನಶಂಕರಿ 6ನೇ ಹಂತ, ಮೂರನೇ ಬ್ಲಾಕ್, ಚಿಕ್ಕೇಗೌಡನ ಪಾಳ್ಯದಲ್ಲಿ ಘಟನೆ ಜರುಗಿದೆ. ನಿನ್ನೆ ಸಂಜೆ ಕುರಿಗೆ ಸೊಪ್ಪು ಕತ್ತರಿಸಲು ತೆರಳಿದ್ದ ವೇಳೆ ಘಟನೆ ಜರುಗಿದೆ.
ನನ್ನ ಬಟ್ಟೆ ಕಂಪ್ಲೀಟ್ ಆಗಿ ಬಿಚ್ಚಿಸಿ ಎಸಿಪಿ ಹಲ್ಲೆ ಮಾಡಿದ್ದಾರೆ: ಪುನೀತ್ ಕೆರೆಹಳ್ಳಿ ಗಂಭೀರ ಆರೋಪ!
ಕುರಿ ಮೇಯಿಸಲು ತೆರಳಿದ್ದ ಶಿವಣ್ಣನನ್ನು ರಾತ್ರಿ ಇಡೀ ಕುಟುಂಬಸ್ಥರು ಹುಡುಕಾಡಿದ್ದರು. ಇಂದು ಬೆಳಗ್ಗೆ ಕುರಿಗಾಯಿ ಶಿವಣ್ಣ ಕುರಿಮೇಯಿಸುವ ಜಾಗದಲ್ಲಿ ಪತ್ತೆಯಾಗಿದ್ದಾರೆ. ಬೆಸ್ಕಾಂ ಅಧಿಕಾರಿಗಳಿಗೆ ಎರಡು ತಿಂಗಳಿನಿಂದ ಸ್ಥಳೀಯರು ದೂರು ನೀಡಿದ್ದರು. ಹಲವು ಬಾರಿ ಕ್ರಮಕ್ಕೆ ಆಗ್ರಹಿಸಿ ಬೆಸ್ಕಾಂಗೆ ದೂರು ನೀಡಿದ್ರು ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.
ತಲಘಟ್ಟಪುರ ಪೊಲೀಸರು, ಬೆಸ್ಕಾಂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.