ಹುಬ್ಬಳ್ಳಿ : ಹಲವು ವರ್ಷಗಳಿಂದ ಹಕ್ಕು ಪತ್ರ ಪಡೆಯುವಲ್ಲಿ ವಿಫಲವಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಬೆಂಗೆರಿ ಗ್ರಾಮದ ಖಾದಿ ಗ್ರಾಮೋದ್ಯೋಗ ಹತ್ತಿರ ಇರುವ ಕೆರಿವಂಡಿ ಕೊಳೆಗೇರಿ ಪ್ರದೇಶದ ಜನರ ಸಮಸ್ಯೆಗೆ ಪರಿಹಾರ ನೀಡುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಕಾಂಗ್ರೆಸ್ ಯುವ ಮುಖಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಮನವಿ ಮಾಡಿದರು. ಇಂದು ಹುಬ್ಬಳ್ಳಿಗೆ ಸಚಿವರು ಆಗಮಿಸಿದ ವೇಳೆ ಅವರನ್ನು ಭೇಟಿ ಮಾಡಿ ಹಲವು ವರ್ಷಗಳಿಂದ ನಡೆದಿರುವ ತೊಂದರೆ ಬಗ್ಗೆ ಸಚಿವರಿಗೆ ವಿವರಣೆ ನೀಡಿದರು. 218 ನಿವಾಸಿಗಳಿಗೆ ವಸತಿ ಹಕ್ಕುಪತ್ರ ವಿತರಿಸುವಂತೆ ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿರುವ ಸಚಿವರು ಇನ್ನೆರೆಡು ತಿಂಗಳಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.
Nikhil Kumaraswamy: ನ.30ರಂದು ಕೃತಜ್ಞತಾ ಸಭೆ: ಕಾರ್ಯಕರ್ತರಿಗೆ ಧೈರ್ಯ ತುಂಬಲು ನಿಖಿಲ್ ಕುಮಾರಸ್ವಾಮಿ ಸಿದ್ಧತೆ