ಬೆಂಗಳೂರು: ನಗರದ ಟಿಸಿಎಸ್ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದ್ದು ಬೆಳ್ಳಂಬೆಳಗ್ಗೆ ಹುಸಿ ಬಾಂಬ್ ಕರೆ ಬಂದಿದ್ದರಿಂದ ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ.
ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ನೆಹರೂ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಸಿಎಸ್ ಕಂಪನಿಯ ಬಿ ಬ್ಲಾಕ್ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆ ಬಂದಿದೆ. ಕೆಲ ಹೊತ್ತು ಆತಂಕದಲ್ಲಿರುವಂತೆ ಮಾಡಿದೆ.
ಕರೆ ಬರುತ್ತಿದ್ದಂತೆ ಕಂಪನಿಯಿಂದ ಉದ್ಯೋಗಿಗಳು ಹೊರ ಬಂದಿದ್ದಾರೆ. ಕೂಡಲೇ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಕಂಪನಿಯ ಬಿ ಬ್ಲಾಕ್ನಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ.