ಹೈದರಾಬಾದ್;- ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ನೋಡುವುದೇ ನನ್ನ ಕನಸು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತೆಲಂಗಾಣದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡಿರುವ ಪಕ್ಷದ ಸರ್ಕಾರವನ್ನು ನೋಡುವುದು ತಮ್ಮ ಕನಸು ಎಂದರು.

ನಾವು ಈಗಾಗಲೇ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ನಾವು ಮಾತುಕೊಟ್ಟಂತೆ ಪ್ರತಿಯೊಂದನ್ನು ಈಡೇರಿಸಲಿದ್ದೇವೆ. ಮುಂಬರುವ ವಿಧಾನಸಭೆ ಚುನಾವನೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿತಿಂಗಳು 2,500 ರೂಪಾಯಿ ಹಣವನ್ನು ನೀಡಲಾಗುವುದು. ರಾಜ್ಯಾದ್ಯಂತರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ಸಿಲಿಂಡರ್ಅನ್ನು 500ರೂಪಾಯಿಗೆ ನೀಡಲಾಗುವುದು. ದಯವಿಟ್ಟು ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದಿದ್ದಾರೆ.
