ಶಿವಮೊಗ್ಗ : ಮಕ್ಕಳಿಗೆ ಆಟವಾಡಲು ವಸ್ತುಗಳನ್ನು ಕೊಡುವಾಗ ಪೋಷಕರು ಎಷ್ಟೇ ಜಾಗೃತೆ ವಹಿಸಿದರೂ ಕಡಿಮೆಯೇ. ಯಾಕಂದ್ರೆ ಮಕ್ಕಳಿಗೆ ಇನ್ನೂ ತಿಳಿಯುವ ವಯಸ್ಸು ಆಗಿರುವುದಿಲ್ಲ. ಅದೇ ರೀತಿ. ಒಂದೂವರೆ ವರ್ಷದ ಮಗುವೊಂದು ಬಾಟೆಲ್ ಮುಚ್ಚಳ ನುಂಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಘಟನೆ ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಪುತ್ರ ನಂದೀಶ್(1.5) ಮೃತಪಟ್ಟ ಮಗುವಾಗಿದ್ದು,
Teachers Day 2024: ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಇತಿಹಾಸ, ಪ್ರಾಮುಖ್ಯತೆ ಗೊತ್ತೇ? ಇಲ್ಲಿದೆ ವಿವರ
ಮನೆಯಲ್ಲಿ ಆಟವಾಡುವ ವೇಳೆ ಬಾಟಲಿಯ ಮುಚ್ಚಳ ನುಂಗಿ ಮಗು ಸಾವನ್ನಪ್ಪಿದೆ. ಮನೆಯಲ್ಲಿ ಜ್ಯೂಸ್ ಬಾಟಲಿ ಹಿಡಿದುಕೊಂಡು ನಂದೀಶ್ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ನುಂಗಿದ ಮುಚ್ಚಳ ಗಂಟಲಲ್ಲಿ ಸಿಲುಕಿದೆ. ನಂತರ ಮುಗುವಿನ ಉಸಿರಾಟದಲ್ಲಿ ಏರುಪೇರಾಗಿದೆ. ತಕ್ಷಣವೇ ಕುಟುಂಬದವರು ವಾಹನವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದೆ ಮಗು ಸಾವನ್ನಪ್ಪಿದೆ.