Facebook Twitter Instagram YouTube
    ಕನ್ನಡ English తెలుగు
    Tuesday, October 3
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Martha Louise: ಮಾಂತ್ರಿಕನನ್ನು ಮದುವೆಯಾಗಲು ತನ್ನ ಸಾಮ್ರಾಜ್ಯವನ್ನೇ ತೊರೆದ ನಾರ್ವೆ ಯುವರಾಣಿ!

    AIN AuthorBy AIN AuthorSeptember 15, 2023
    Share
    Facebook Twitter LinkedIn Pinterest Email

    ಓಸ್ಲೋ: ಕಿಂಗ್ ಹರಾಲ್ಡ್ ಹಾಗೂ ರಾಣಿ ಸೋಂಜಾ ಅವರ ಹಿರಿಯ ಪುತ್ರಿ ನಾರ್ವೆಯ ರಾಜಕುಮಾರಿ (Norway Princess) ಮಾರ್ಥಾ ಲೂಯಿಸ್ (Martha Louise) ಮುಂದಿನ ವರ್ಷ ಆಗಸ್ಟ್ 31ರಂದು ಮಾಂತ್ರಿಕ ಶಾಮನ್ ಡ್ಯುರೆಕ್ ವೆರೆಟ್ (Durek Verrett) ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾರೆ.

    51 ವರ್ಷದ ರಾಜಕುಮಾರಿ ಮಾಂತ್ರಿಕ, ಅಮೆರಿಕದ ಖ್ಯಾತ ಚಿಂತಕ, ಪ್ರಕೃತಿ ಚಿಕಿತ್ಸಕನಾದ ಡ್ಯುರೆಕ್ ವೆರೆಟ್ ಅವರೊಂದಿಗೆ 2022ರ ಜೂನ್‌ನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಏಕೆಂದರೆ ಡ್ಯುರೆಕ್‌ನನ್ನು ವಂಚಕ, ಹಣಕ್ಕಾಗಿ ರಾಜಕುಮಾರಿಯನ್ನು ಬಳಸಿಕೊಳ್ಳುತ್ತಿರುವುದಾಗಿ ಸ್ಥಳೀಯವಾಗಿ ವೀಡಿಯೋಗಳು ಹರಿದಾಡಿತ್ತು.

    Demo

    ಈ ಹಿನ್ನೆಲೆ ಮಾರ್ಥಾ ಲೂಯಿಸ್ ಡ್ಯುರೆಕ್ ವೆರೆಟ್ ಅವರನ್ನು ಮದುವೆಯಾಗಲು ಅಧಿಕೃತ ರಾಜಮನೆತನದ ಯಾವುದೇ ಕರ್ತವ್ಯ ಹಾಗೂ ಸ್ಥಾನಮಾನಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದರು. ತನ್ನ ರಾಜಮನೆತನದ ಬಿರುದನ್ನು ಬಳಸುವುದಿಲ್ಲ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಥವಾ ಯಾವುದೇ ವಾಣಿಜ್ಯ ಸಂಸ್ಥೆಯಲ್ಲಿ ರಾಯಲ್ ಪದವನ್ನು ಬಳಸುವುದಿಲ್ಲ ಎಂದಿದ್ದರು.

    ಲಿಬಿಯಾದಲ್ಲಿ ಭೀಕರ ಪ್ರವಾಹ: 5,300 ಮಂದಿ ಸಾವು – 10 ಸಾವಿರಕ್ಕೂ ಹೆಚ್ಚು ಜನ ನಾಪತ್ತೆ

    ಇದೀಗ ಜೋಡಿ ತಮ್ಮ ಮದುವೆಯ ದಿನಾಂಕವನ್ನು ಘೋಷಿಸಿಕೊಂಡಿದ್ದಾರೆ. ಮಾತ್ರವಲ್ಲದೇ 1968ರಲ್ಲಿ ಸಾಮಾನ್ಯ ಮಹಿಳೆಯಾಗಿದ್ದ ಸೋಂಜಾ ಅವರನ್ನು ವಿವಾಹವಾಗಿದ್ದ ಕಿಂಗ್ ಹರಾಲ್ಡ್ ಅವರ ಆಶೀರ್ವಾದವನ್ನೂ ಜೋಡಿ ಪಡೆದುಕೊಂಡಿದೆ. ಪ್ರತ್ಯೇಕ ಹೇಳಿಕೆಯಲ್ಲಿ ರಾಜ, ರಾಣಿ, ಹಾಗೂ ಕ್ರೌನ್ ಪ್ರಿನ್ಸ್ ಹಾಕಾನ್ ಜೋಡಿಯನ್ನು ಅಭಿನಂದಿಸಿದ್ದಾರೆ.

    ಡ್ಯುರೆಕ್ ವೆರೆಟ್ ಅವರನ್ನು ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ ಎಂದಿದ್ದಾರೆ. ಇಬ್ಬರ ಮದುವೆ ನೈಋತ್ಯ ನಾರ್ವೆಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾದ ಫ್ಜೋರ್ಡ್ ತೀರದಲ್ಲಿರುವ ಗೈರಾಂಜರ್ ಪಟ್ಟಣದಲ್ಲಿ ನಡೆಯಲಿದೆ. ರಾಜಕುಮಾರಿ ಮಾರ್ಥಾ ಲೂಯಿಸ್ ಈ ಹಿಂದೆ ಖ್ಯಾತ ಬರಹಗಾರ ಅರಿ ಬೆಹ್ನ್ ಅವರನ್ನು ಮದುವೆಯಾಗಿದ್ದರು. ಬಳಿಕ ವಿಚ್ಛೇದಿತರಾಗಿ 3 ವರ್ಷಗಳ ಬಳಿಕ 2019ರಲ್ಲಿ ಬೆಹ್ನ್ ಆತ್ಮಹತ್ಯೆಗೆ ಶರಣಾಗಿದ್ದರು. ಮಾರ್ಥಾ ಲೂಯಿಸ್‌ಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ.  

     

    Demo
    Share. Facebook Twitter LinkedIn Email WhatsApp

    Related Posts

    Ouyang Ziyuan: ಭಾರತದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ: ಚೀನಾ ವಿಜ್ಞಾನಿ

    October 3, 2023

    16 Pakistani ‘Beggars’: ಭಿಕ್ಷಾಟನೆಗಾಗಿ ವಿಮಾನದಲ್ಲಿ ಸೌದಿಗೆ ತೆರಳುತ್ತಿದ್ದ 16 ಪಾಕಿಸ್ತಾನಿ ಭಿಕ್ಷುಕರು ಅರೆಸ್ಟ್..!

    October 3, 2023

    Wagh Nakh: 350 ವರ್ಷದ ಬಳಿಕ ಲಂಡನ್ ನಿಂದ ಭಾರತಕ್ಕೆ ಮರಳಿ ಬರುತ್ತಿದೆ ಶಿವಾಜಿಯ ʼʼವ್ಯಾಘ್ರ ನಖʼʼ ಆಯುಧ..!

    October 3, 2023

    Mexico: ಮೆಕ್ಸಿಕೋದಲ್ಲಿ ಭೀಕರ ಅಪಘಾತ: 10 ಜನ ಸಾವು, 17 ಜನರಿಗೆ ಗಾಯ

    October 2, 2023

    Linda Yaccarino: ಎಲೋನ್ ಮಸ್ಕ್ ಟ್ವಿಟ್ಟರ್ ವಹಿಸಿಕೊಂಡ ನಂತರ ಬಳಕೆದಾರರ ಸಂಖ್ಯೆ ಕುಸಿತ ಕಂಡಿದೆ: ಸಿಇಒ

    October 2, 2023

    S Jaishankar: ಅಭಿವ್ಯಕ್ತಿ ಸ್ವಾತಂತ್ರ್ಯವು ಹಿಂಸಾಚಾರದ ಕುಮ್ಮಕ್ಕು ನೀಡುವ ಮಟ್ಟಿಗೆ ಇರುತ್ತದೆ: ಎಸ್ ಜೈಶಂಕರ್

    October 2, 2023

    sex crimes against 42 dogs: ವಿಕೃತ ಕಾಮಿಯ ಅಟ್ಟಹಾಸಕ್ಕೆ ಬಲಿಯಾಯ್ತು 42 ಮೂಕ ಪ್ರಾಣಿಗಳು..!

    October 2, 2023

    Most Wanted terror : ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಟೆಂಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ!

    October 1, 2023

    ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಮುಂದೆ: ವಿದೇಶಗಳಲ್ಲಿ ಬಂಧನಕ್ಕೊಳಗಾದ ಭಿಕ್ಷುಕರೆಷ್ಟು?

    October 1, 2023

    ಮತ್ತೆ ಕೋವಿಡ್ -19 ಗಿಂತ ಮಾರಕವಾದ ಕಾಯಿಲೆ ವಕ್ಕರಿಸಲಿದೆ ಎಂದ WHO: ರೋಗದ ಹೆಸರೇ X

    October 1, 2023

    ಮಾಧ್ಯಮದಲ್ಲಿ ಡಿಬೆಟ್’ ಮಾಡ್ತಿದ್ದ ಮಧ್ಯನೇ ಹೊಡೆದಾಡಿಕೊಂಡ ಇಬ್ಬರು ರಾಜಕಾರಣಿಗಳು: ವಿಡಿಯೋ ವೈರಲ್  

    October 1, 2023

    ಪೋಷಕರು ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸದಿದ್ರೆ ಜೈಲು: ಪಾಕ್’ನಲ್ಲಿ ಹೊಸ ಕಾನೂನು!

    September 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.