ಬೆಂಗಳೂರು:- ಕಾಂಗ್ರೆಸ್ ಕಾರ್ಯಕರ್ತನೊಬ್ಬ ಸೊಂಟಕ್ಕೆ ಗನ್ ಸಿಕ್ಕಿಸಿಕೊಂಡು, ಸಿಎಂ ಇದ್ದ ವಾಹನ ಹತ್ತಿ, ಸಿದ್ದರಾಮಯ್ಯ ಅವರಿಗೆ ಹಾರ ಹಾಕಿದ್ದ. ಈ ವೇಳೆ ಗನ್ ನೋಡಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಬಿಸಿಲಿನಿಂದ ಬಳಲಿ ಬೆಂಡಾದ ಜನತೆಗೆ ಗುಡ್ ನ್ಯೂಸ್ – 3 ದಿನ ಮಳೆ ಗ್ಯಾರಂಟಿ!
ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ್ದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಅಲರ್ಟ್ ಆದ್ರು. ಸಿದ್ದಾಪುರ ಪೊಲೀಸ್ ಠಾಣೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ದೌಡಾಯಿಸಿ, ಮಾಹಿತಿ ಪಡೆದ್ರು.
ಇನ್ನು ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ ವ್ಯಕ್ತಿಯನ್ನು ರಿಯಾಜ್ ಅಂತ ಗುರುತಿಸಲಾಗಿದೆ. ಈಗ ಬೆಂಗಳೂರಿನ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಸುಮಾರು 25 ವರ್ಷಗಳಿಂದಲೂ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದಾನೆ.
ಸಿಎಂ ಬಳಿ ಗನ್ ಇಟ್ಟುಕೊಂಡು ಹೋಗಿದ್ಯಾಕೆ ಎಂಬ ಆಯಾಮದಲ್ಲಿ ರಿಯಾಜ್ನ ವಿಚಾರಣೆ ನಡೆಸಲಾಯ್ತು. ದೃಶ್ಯಾವಳಿಯಲ್ಲಿ ಗನ್ ಇಟ್ಟುಕೊಂಡು ಬಿಲ್ಡಪ್ ಕೊಟ್ಟಂತಿದ್ದು, ಆ ಬಗ್ಗೆ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ರಿಯಾಜ್ ಹಲವು ವಿಚಾರ ಹೇಳಿದ್ದಾನೆ ಎನ್ನಲಾಗಿದೆ. ಈ ಹಿಂದೆ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ದೂರು ನೀಡಿದ್ದ ಬಗ್ಗೆ ಮಾಹಿತಿ ನೀಡಿದ್ದಾನೆ. 2021ರಲ್ಲಿ ಸಿದ್ಧಾಪುರ ಠಾಣೆಗೆ ದೂರು ನೀಡಿದ್ದು, ಆ ಬಳಿಕ ತನಗೆ ಜೀವ ಬೆದರಿಕೆ ಇದೆ ಎಂದು ಮನವಿ ಮಾಡಿದ್ದ. ಅದರಂತೆ ಪರ್ಮಿಷನ್ ಪಡೆದು ಗನ್ ಪಡೆದುಕೊಂಡಿದ್ದನಂತೆ. ಚುನಾವಣೆ ಸಂದರ್ಭದಲ್ಲೂ ಸಹ ಜೀವಭಯವನ್ನು ಉಲ್ಲೇಖಿಸಿ ಅನುಮತಿ ಪಡೆದಿದ್ದ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ, ಸದ್ಯ ರಿಯಾಜ್ ಎಂಬಾತನನ್ನ ವಿಚಾರಣೆ ಮಾಡ್ತಿದ್ದೇವೆ. ಈ ಹಿಂದೆ ತನ್ನ ಮೇಲೆ ಅಟ್ಯಾಕ್ ಆಗಿದೆ ಎಂದು ದೂರು ನೀಡಿದ್ದ.. ಆ ಬಳಿಕ ತನಗೆ ಜೀವ ಬೆದರಿಕೆ ಇದೆ ಮನವಿ ಮಾಡಿದ್ದ.. ಚುನಾವಣೆ ಸಂದರ್ಭದಲ್ಲೂ ಸಹ ಜೀವಭಯವನ್ನು ಉಲ್ಲೇಖಿಸಿ ಅನುಮತಿ ಪಡೆದಿದ್ದ ಎಂದಿದ್ದಾರೆ