ಚಾಮರಾಜನಗರ: ದಿಂಬಂ 27ನೇ ತಿರುವಿನಲ್ಲಿ ಕಾರಿನ ಮೇಲೆ ಕಬ್ಬು ತುಂಬಿದ ಲಾರಿ ಪಲ್ಟಿಯಾಗಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Lok Sabha Elections 2024: ಪ್ರಧಾನಿ ಮೋದಿ ಕರ್ನಾಟಕ ಭೇಟಿಗೆ ದಿನಾಂಕ ಫಿಕ್ಸ್: ಈ ಕ್ಷೇತ್ರಗಳೇ ಬಿಗ್ ಟಾರ್ಗೆಟ್!
ಕಂಜನಾಯಕ್ಕನೂರು ನಿವಾಸಿ ಸೆಲ್ವಂ(50), ಇಂದಿಯಂಪಾಳಯಂ ನಿವಾಸಿ ಚನ್ನಯ್ಯನ್(55), ನಂಬಿಯಾರ್ ನಿವಾಸಿ ಕುಮಾರ್(60) ಮೃತರಾಗಿದ್ದು ಸೌಂದರ್ ರಾಜ್, ಸೆಲ್ವಂ ಹಾಗು ಮನೋಹರ್ ಎಂಬುವರಿಗೆ ಗಾಯಗಳಾಗಿವೆ.
ತಾಳವಾಡಿಯಿಂದ ಸತ್ಯಮಂಗಲದ ಕಡೆ ತೆರಳುತ್ತಿದ್ದ ಕಬ್ಬು ತುಂಬಿದ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಪಲ್ಟಿಯಾದ ಕಬ್ಬು ತುಂಬಿದ ಲಾರಿ. ರಸ್ತೆ ಸಂಚಾರ ಅಸ್ತವ್ಯಸ್ತ, ಸ್ಥಳಕ್ಕೆ ಆಸನೂರು ಪೊಲೀಸರ ಭೇಟಿ
ಮೃತ ದೇಹಗಳು ಸತ್ಯಮಂಗಲ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಅಫಘಾತದಲ್ಲಿ ಮೃತರ ಮಾಹಿತಿ ಲಭ್ಯವಾಗಿಲ್ಲ. ಆಸನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.