ವಿಜಯಪುರ: ಚಲಿಸುತ್ತಿದ ಲಾರಿಯಲ್ಲಿ ಬೆಂಕಿ ಅವಘಡ.. ತಪ್ಪಿದ ಅನಾಹುತ!

ವಿಜಯಪುರ:- ಚಲಿಸುತ್ತಿದ ಲಾರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಮೊರಟಗಿ ಗ್ರಾಮದ ಬಳಿ ಜರುಗಿದೆ. Breaking: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ… ಸ್ಥಳದಲ್ಲೇ ಬೈಕ್ ಸವಾರ ಸಾವು! ಸಂದೀಪ ಎಂಬುವರಿಗೆ ಸೇರಿದ ಲಾರಿ ಅರ್ಧ ಭಸ್ಮವಾಗಿದೆ. ಸಿಂದಗಿ ಮಾರ್ಗವಾಗಿ ಕಲಬುರಗಿಗೆ ಲಾರಿ ಹೋಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.