ದಾವಣಗೆರೆ ;-ಇಬ್ಬರು ಯುವಕರ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿರುವ ಘಟನೆ ದಾವಣಗೆರೆ ನಗರದ ವಸಂತ ಚಿತ್ರಮಂದಿರದಲ್ಲಿ ಜರುಗಿದೆ. ಜಗಳದಲ್ಲಿ ಕೈಗೆ ಬಾಯಿಯಿಂದ ಯುವಕ ಕಚ್ಚಿದ್ದಾನೆ.
ಲೋಕೇಶ್ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ. ಸಚಿನ್ ಬನ್ನಿಕಟ್ಟಿ ಎನ್ನುವರ ಜೊತೆ ಲೋಕೇಶ್ ಜಗಳವಾಡಿದ್ದ. ವಾಗ್ವಾದ ಮಾಡುತ್ತಾ ಲೋಕೇಶ್ ಮೇಲೆ ಸಚಿನ್ ಹಲ್ಲೆ ನಡೆಸಿದ್ದ. ಹಳೇ ದ್ವೇಷದ ಹಿನ್ನಲೆ ಇಬ್ಬರಿಗೂ ವಾಗ್ವಾದ ನಡೆದಿದೆ.
ಜಗಳದಲ್ಲಿ ಕೈಗೆ ಬಾಯಿಯಿಂದ ಕಚ್ಚಿ ಸಚಿನ್ ಗಾಯಗೊಳಿಸಿದ್ದಾನೆ ಎನ್ನಲಾಗಿದೆ. ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.