ನಾವು ಕೆಲಸ ಮಾಡುವವರು ಎಂದಾದ ಮೇಲೆ ಇದೇ ಕೆಲಸ ಮಾಡಬೇಕಾಗಿಲ್ಲ ಯಾವುದಾದರೇನು ಆದ್ರೆ ಒಳ್ಳೆಯ ರೀತಿ ನೀತಿ ಇರಬೇಕು ಹಾಗೆ ಯಾವುದೇ ಕೆಲಸವಾದ್ರೂ ಸರಿ ಅದರಲ್ಲೂ ಎಲ್ಲರು ಕಂಪನಿಗಳತ್ತ ಮುಖ ಮಾಡಿತ್ತಿರುವಾಗ ಇಲ್ಲೊಬ್ಬರು ಯಶಸ್ಸಿನತ್ತ ಹೆಜ್ಜೆ ಹಾಕುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹೃಷಿಕೇಶ್ ಜಯಸಿಂಗ್ ಧಾನೆ ಅವರ ಅಲೋವೆರಾ ಕೃಷಿ ಮಾಡಿದ್ದಾರೆ ಹಾಗೆ ಬಹು ಎತ್ತರಕ್ಕೆ ಬೆಳೆದ ರೈತ ಅವರ ಸಾಧನೆ ನೀವು ನೋಡಲೇಬೇಕು!
ಮಹಾರಾಷ್ಟ್ರದ (Maharashtra) ಬರಪೀಡಿತ ಸತಾರಾದಲ್ಲಿ ರೈತ ಹೃಷಿಕೇಶ್ ಜಯಸಿಂಗ್ ಧಾನೆ (Hrushikesh Jayasing Dhane) ಎಂಬುವವರು ಅಲೋವೆರಾ (Aloe vera) ಉತ್ಪನ್ನಗಳಾದ ಸೋಪುಗಳು, ಶಾಂಪೂಗಳು ಮತ್ತು ಜ್ಯೂಸ್ಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಬಹುಕೋಟಿ ವ್ಯವಹಾರವನ್ನು ಸೃಷ್ಟಿಸಿ ಅಲ್ಲಿನ ಕಷ್ಟವನ್ನು ಲಾಭವನ್ನಾಗಿಸಿಕೊಂಡಿದ್ದಾರೆ.
ಅನ್ನದಾತರಿಗೆ ಗುಡ್ ನ್ಯೂಸ್: ಈ ರೈತರ ಬೆಳೆ ಸಾಲಮನ್ನಾಕ್ಕೆ ಬಿಡುಗಡೆಯಾಯ್ತು 232ಕೋಟಿ ಹಣ
ಅಲೋವೆರಾ ಕೃಷಿ ಆರಂಭದ ದಿನಗಳನ್ನು ನೆನಪಿಸಿಕೊಂಡ ಹೃಷಿಕೇಶ್
“ಉದ್ಯಮಿಯೊಬ್ಬರು ನಮ್ಮ ಗ್ರಾಮಕ್ಕೆ ಬಂದು ಅಲೋವೆರಾ ಕೃಷಿಯ ಬಗ್ಗೆ ಜಾಹೀರಾತು ನೀಡಿದ್ದರು. ರೈತರು ಒಂದು ಕಡೆ ಹಣದ ಬಣವೆ ಹಾಗೂ ಇನ್ನೊಂದು ಕಡೆ ಅಲೋವೆರಾ ಗಿಡಗಳನ್ನು ಹೊಂದಿರುವ ಕರಪತ್ರಗಳನ್ನು ವಿತರಿಸಿದರು. ಅದರಲ್ಲಿ ‘ಅಲೋವೆರಾ ಲಗಾಯಿಯೇ ಔರ್ ಲಾಖೋ ಕಮಾಯಿಯೆ’ (ಅಲೋವೆರಾ ಬೆಳೆದು ಲಕ್ಷಗಳಲ್ಲಿ ಗಳಿಸಿ) ಎಂದು ನಮೂದಿಸಲಾಗಿತ್ತು” ಎಂದು ರೈತ ಹೃಷಿಕೇಶ್ ಜಯಸಿಂಗ್ ಧಾನೆ (44) ತಮ್ಮ ಹಳೆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಇದರಿಂದ ಪ್ರಭಾವಿತರಾದ ಹಲವಾರು ರೈತರು ಸಾವಿರಾರು ಗಿಡಗಳನ್ನು ಖರೀದಿಸಿ ತಮ್ಮ ಬಂಜರು ಭೂಮಿಯಲ್ಲಿ ನೆಟ್ಟರು. ನನಗೆ ಈ ಕೃಷಿ ಬಗ್ಗೆ ಕುತೂಹಲವಿತ್ತು, ಆದರೆ ನನಗೆ ಅದರ ಬಗ್ಗೆ ಅನುಮಾನವಿತ್ತು. ಹಾಗಾಗಿ ಮೇಲಿನ ಜಾಹೀರಾತು ನೀಡಿದ ಕಂಪನಿಯ ಕಚೇರಿಗೆ ಹೋಗಿ ಈ ಕೃಷಿಯ ಬಗ್ಗೆ ಮಾರುಕಟ್ಟೆಯಲ್ಲಿ ಹೇಗಿದೆ ವಹಿವಾಟು ಎಂದು ವಿಚಾರಿಸಿದೆ. ಅಲೋವೆರಾದಿಂದ ಲಕ್ಷಗಟ್ಟಲೆ ಆದಾಯ ಗಳಿಸಿದ 10 ರೈತರ ಬಗ್ಗೆ ಹೇಳಲು ನಾನು ಕೇಳಿದೆ. ಆಗ ಸ್ಥಳೀಯ ಅಧಿಕಾರಿಗಳು ಕೋಪಗೊಂಡು ನನ್ನನ್ನು ಕಚೇರಿಯಿಂದ ಹೊರಹಾಕಿದರು ಎಂದು ಹೇಳಿದರು