ಕೊಲಂಬೋ: ಟೀಂ ಇಂಡಿಯಾ (Team India) ಆಟಗಾರ ಕೊಹ್ಲಿಗೆ (Virat Kohli) ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ (Asia Cup) ಪಂದ್ಯದ ವೇಳೆ ಚಿತ್ರ ಕಲಾವಿದೆಯೊಬ್ಬರು ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
https://x.com/KohliSensation/status/1702009527988797765?s=20

ಕೊಹ್ಲಿ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿರುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಆಗಾಗ ಈ ರೀತಿಯ ಉಡುಗೊರೆಗಳು ಒಲಿದು ಬರುತ್ತವೆ. ಈಗ ಈ ಭಾವಚಿತ್ರವನ್ನು ಪಡೆದು ಸಂಭ್ರಮಿಸಿದ ಕ್ಷಣ ವೀಡಿಯೋದಲ್ಲಿ ಸೆರೆಯಾಗಿದೆ. ಅದರಲ್ಲಿ ಯುವತಿಗೆ ಕೊಹ್ಲಿ ಧನ್ಯವಾದ ತಿಳಿಸಿ ಸಂಭ್ರಮಿಸಿದ್ದಾರೆ
ಈ ವಾರದ ಆರಂಭದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಕೊಹ್ಲಿ 47ನೇ (ಏಕದಿನ ಪಂದ್ಯದಲ್ಲಿ) ಶತಕವನ್ನು ದಾಖಲಿಸಿದ್ದರು. ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು ನಾನು ತಂಡಕ್ಕೆ ಸಹಾಯ ಮಾಡುವ ರೀತಿಯಲ್ಲಿ ಆಡಲು ಸದಾ ತಯಾರಾಗಿರುತ್ತೇನೆ ಎಂದಿದ್ದರು.
