ಆನೇಕಲ್ :ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ನಗರದಲ್ಲಿ ನಡೆದ ಯುವತಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರ ಆರೋಪಿಗಳನ್ನು ಬಂಧಿಸುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ..ಹೌದು, ಕೇರಳ ಮೂಲದ ಯುತಿಯೊಬ್ಬಳು ಬಿಟಿಎಂ ಲೇಔಟ್ ನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಗುರುವಾರ ರಾತ್ರಿ ತನ್ನ ಮನೆಗೆ ತೆರಳಲು ಬಿಟಿಎಂ ಲೇಔಟ್ ನಿಂದ ನಿಲಾದ್ರಿ ನಗರಕ್ಕೆ ರ‌್ಯಾಪಿಡೋ ಬೈಕ್ ಬುಕ್ಕಿಂಗ್ ಮಾಡಿದ್ದಾಳೆ , ಪಿಕ್ ಅಪ್ ವೇಳೆ ಯುವತಿ ಮದ್ಯಪಾನ ಮಾಡಿರುವುದಾಗಿ ಬಂದಿತಾರೋಪಿಗಳಿಗೆ ಗೊತ್ತಾಗಿದೆ..
ನಂತರ ನಿಲಾದ್ರಿ ನಗರಕ್ಕೆ ತಲುಪುವ ವೇಳೆಗೆ ಆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು ಆಗ ರಾಪಿಡೋ ಬೈಕ್ ಸವಾರ ಸ್ನೇಹಿತನ ನೆರವಿನಿಂದ ನಿಲಾದ್ರಿ ನಗರದ ತನ್ನ ರೂಮ್‌ಗೆ ಕರೆದೊಯ್ದು ಅಕೆ ಮೇಲೆ ಅತ್ಯಾಚಾರ ಎಸಗಿ ಪ್ರಜ್ಞೆ ಬಂದ ಬಳಿಕ ಯುವತಿಯನ್ನು ಬಿಟ್ಟು ಕಳುಹಿಸಿದ್ದರು.ಇನ್ನು ಯಾರಿಗೂ ಹೇಳದಂತೆ ಬೆದರಿಕ ಸಹ ಹಾಕಿದ್ದರು .ಇನ್ನು ಘಟನೆ ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಯುವತಿ ದೂರು ನೀಡಿದರು ದೂರು ಆಧರಿಸಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ ಇನ್ನು ಈ ಸಂಬಂಧಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ..

