ಚಿಕ್ಕಬಳ್ಳಾಪುರ: ವ್ಯಕ್ತಿಯ ಕತ್ತು ಸಿಳಿ ಆತನ ರಕ್ತ ಹಿರಿ ರಾಕ್ಷಸನಂತೆ ವರ್ತಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ ಎನ್ನಲಾಗಿದೆ. ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.. ಇನ್ನು ಪೋಲಿಸ್ ಮೂಲಗಳ ಪ್ರಕಾರ ವ್ಯಕ್ತಿಯ ಕತ್ತು ಸಿಳಿ ರಕ್ತ ಹಿರುತ್ತಿರುವ ವ್ಯಕ್ತಿ ಚಿಂತಾಮಣಿ ತಾಲೂಕು ಬಟ್ಲಹಳ್ಳಿ ಗ್ರಾಮದ ವಿಜಯ್ ಆಗಿದ್ದು ಈತ ಪ್ರಸ್ತುತ ಚಿಂತಾಮಣಿ ನಗರದ ಗಾಂದಿನಗರದಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಕತ್ತು ಸಿಳಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವ ವ್ಯಕ್ತಿ ಚೇಳೂರಿನ ಮಾರೇಶ್ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ, ಕತ್ತು ಸೀಳಿ ರಕ್ತ ಹೀರುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ.. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದುಷ್ಕೃತ್ಯ ನಡೆದಿರಬಹುದು ಎನ್ನಲಾಗಿದೆ.. ದುರ್ಘಟನೆ ಎಲ್ಲಿ, ಯಾವಾಗ, ಯಾವ ವಿಷಯಕ್ಕೆ ನಡೆದಿದೆ ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ಹೋರಬರಬೇಕಾಗಿದೆ.

