ತುಮಕೂರು: ಗದ್ದುಗೆಯಲ್ಲಿ ಹುತ್ತ ಕಾಣಿಸಿಕೊಂಡಿದೆ. ಹೌದು ಯಡಿಯೂರು ಸಿದ್ದಲಿಂಗೇಶ್ವರರ 12 ವರ್ಷ ತಪಗೈದ ತಪೋ ಕ್ಷೇತ್ರ ಕಗ್ಗೆರೆಯಲ್ಲಿ 15 ಶತಮಾನದ ಹುತ್ತ ಪುನಃ ಬೆಳೆಯಲು ಆರಂಭಿಸಿದ್ದು, ಸಾರ್ವಜನಿಕರು ಹಾಗೂ ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ. ರಾಜ್ಯ ಸರ್ಕಾರದಿಂದ ಸುಮಾರು ನಾಲ್ಕು ಕೋಟಿ ಅಂದಾಜು ವೆಚ್ಚದಲ್ಲಿ ಕಗ್ಗೆರೆ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಹಳೆಯ ದೇವಾಲ ತೆರುವುಗೊಳಿಸಿದ ವೇಳೆ ದೇವಾಲಯದ ಗದ್ದುಗೆಯನ್ನು ಕೂಡ ತೆರವುಗೊಳಿಸಲಾಯಿತು. ಆ ಗದ್ದುಗೆಯ ಸ್ಥಳದಲ್ಲಿ ಕೆಲವು ದಿನಗಳಿಂದ ಹುತ್ತದ ರೀತಿಯ ಕೊಳವೆ ಆಕಾರದ ಕೋವೆಗಳು ಇದೆ ಎಂಬುದನ್ನು ಹಲವಾರು ಭಕ್ತರು ಗುರುತಿಸಿ ಅಧಿಕಾರಿಗಳಿಗೆ ತೋರಿಸಿದ್ದಾರೆ.
ದೀಪೋತ್ಸವ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೇರಳವಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಭಕ್ತರು ಆ ಬೆಳೆಯುವ ಹುತ್ತಗಳನ್ನು ಮುಟ್ಟುವ ಪ್ರಯತ್ನ ಮಾಡಿದ್ದರು. ಕೆಲವು ಭಕ್ತರ ಒತ್ತಾಯದ ಮೇರೆಗೆ ಸ್ಥಳೀಯ ಆಡಳಿತ ಮಂಡಳಿಯ ಅಧಿಕಾರಿಗಳು ಒಡೆದು ಹಾಕಲಾಗಿದ್ದ ಗದ್ದಿಗೆಯ ಸುತ್ತಲೂ ಬ್ಯಾರಿಕೆಟ್ ಹಾಕಿ ತಾತ್ಕಾಲಿಕ ರಕ್ಷಣೆ ಮಾಡಿದ್ದಾರೆ.