ತುಮಕೂರು : ಬಾಲಕನ ಎಡಗಾಲಿನ ಸೊಂಟಕ್ಕೆ ನೀಡಬೇಕಿದ್ದ ಚುಚ್ಚುಮದ್ದು ನರಕ್ಕೆ ನೀಡಿದ ಪರಿಣಾಮ 9 ವರ್ಷದ ಬಾಲಕ ತನ್ನ ಕಾಲಿನ ಸ್ವಾಧೀನವನ್ನೇ ಕಳೆದುಕೊಂಡಿದ್ದಾನೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ 9 ವರ್ಷದ ಬಾಲಕ ಗಿರೀಶ್ ಸ್ವಾಧೀನ ಕಳೆದುಕೊಂಡಿದ್ದಾನೆ.
ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ್ ಕಿಡ್ನ್ಯಾಪ್ ಪ್ರಕರಣ ; ಬೆಳಗಾವಿ ಎಸ್ಪಿ ಹೇಳಿದಿಷ್ಟು..?
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣ್ಣದ ರಾಘವೇಂದ್ರ ಆಸ್ಪತ್ರೆಯ ವಿರುದ್ಧ ಪೋಷಕರ ಆರೋಪ ಮಾಡಿದ್ದಾರೆ. ಮಧುಗಿರಿ ತಾಲೂಕಿನ ಕೃಷ್ಣಯ್ಯನಪಾಳ್ಯ ಗ್ರಾಮದ ಗಂಗರಾಜು ಎಂಬುವರ ಮಗನಾದ ಗಿರೀಶ್ನನ್ನು ಕಳೆದ ಫೆ.6ರಂದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಜ್ವರಕ್ಕೆ ಇಂಜೆಕ್ಷನ್ ಬರೆದುಕೊಟ್ಟಿದ್ದರು. ಆದರೆ ಆಸ್ಪತ್ರೆಯ ನರ್ಸ್ ಸರಿಯಾಗಿ ಇಂಜೆಕ್ಷನ್ ನೀಡದೇ ನರದ ಮೇಲೆ ಇಂಜೆಕ್ಷನ್ ಕೊಟ್ಟ ಆರೋಪ ಮಾಡಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಸಿದ್ದಾರ್ಥ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.