ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಮ್ಮ ಪ್ರೆಗ್ನೆಂಟ್ ವಿಷಯ ಘೋಷಿಸಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸುದ್ದಿ ಹೊರಬಿದ್ದಾಗಿನಿಂದ, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅತಿಯಾ ಮತ್ತು ರಾಹುಲ್ಗೆ ಶುಭ ಹಾರೈಕೆಗಳು ಮತ್ತು ಪ್ರೀತಿಯನ್ನು ಸುರಿಸುತ್ತಿದ್ದಾರೆ.
ನಟಿ ಪತಿ ಕೆ.ಎಲ್. ರಾಹುಲ್ ಜೊತೆಗೆ ಪೋಸ್ ನೀಡುತ್ತಾ “ಓ ಬೇಬಿ!” ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಈ ಫೋಟೋದಲ್ಲಿ ದಂಪತಿಗಳು ಅತ್ಯಂತ ಆತ್ಮೀಯ ಹಾಗೂ ಸಂತೋಷದಲ್ಲಿ ಇರುವುದು ಕಂಡುಬಂದಿದೆ.
ರಾಹುಲ್, ಪತ್ನಿ ಅಥಿಯಾ ಅವರನ್ನ ಅಪ್ಪಿಕೊಂಡು ಸೋಫಾದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಹಾಗೂ ಅವರ ಮಡಿಲಲ್ಲಿ ಮಲಗಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಥಿಯಾ ಶೆಟ್ಟಿ ಶೀಘ್ರವೇ ತಾಯಿಯಾಗಲಿದ್ದಾರೆ.
ಅನೇಕರು “ಅಸ್ಲಿ ಟ್ರೋಫಿ ಯಾಹಿ ಹೈ ಭಾಯ್” ಎಂದು ಕಾಮೆಂಟ್ ಮಾಡಿದ್ದಾರೆ. ಟೈಗರ್ ಶ್ರಾಫ್ ಕೂಡ ಕಾಮೆಂಟ್ ವಿಭಾಗದಲ್ಲಿ ಕೆಂಪು ಹೃದಯದ ಎಮೋಜಿಗಳನ್ನು ಹಾಕಿದ್ದಾರೆ.
ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಥಿಯಾ ಶೆಟ್ಟಿ ಶೀಘ್ರವೇ ತಾಯಿಯಾಗಲಿದ್ದಾರೆ.