ಬೆಳಗಾವಿ:- ಬೆಳಗಾವಿಯಲ್ಲಿ ಗ್ರಾಮ ಪಂಚಾಯತಿ ಕಚೇರಿಗೆ ನುಗ್ಗಿ ಪಿಡಿಓಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಓಗೆ ಧಮ್ಕಿ ಹಾಕಿದ್ದ ಮರಾಠಿ ಯುವಕನನ್ನು ಅರೇಸ್ಟ್ ಮಾಡಲಾಗಿದೆ.
ಹುಬ್ಬಳ್ಳಿ ಫ್ಲೈ ಓವರ್ ಕಾಮಗಾರಿ ವೇಗಕ್ಕೆ ಗಡ್ಕರಿ ಸೂಚನೆ: ಹೆಚ್ಚುವರಿ ಆರ್ಥಿಕ ನೆರವಿಗೆ ಒಪ್ಪಿಗೆ!
ಬೆಳಗಾವಿ ತಾಲೂಕಿನ ಕೀಣೆ ಗ್ರಾಮದ ತಿಪ್ಪಣ್ಣ ಡೋಕ್ರೆ ಬಂಧಿತ ಯುವಕ. ಈತ ಕೀಣೆ ಗ್ರಾಮ ಪಂಚಾಯತಿ ಕಚೇರಿಗೆ ನುಗ್ಗಿ ಪುಂಡಾಟ ಪ್ರದರ್ಶಿಸಿದ್ದ. ಅಷ್ಟೇ ಅಲ್ಲದೇ ಪಿಡಿಓ ನಾಗೇಂದ್ರ ಪತ್ತಾರ ಜೊತೆಗೆ ಮರಾಠಿಯಲ್ಲಿ ಮಾತಾಡುವಂತೆ ಅವಾಜ್ ಹಾಕಿದ್ದ. ಹಾಗೂ ಪಿಡಿಓ ಪತ್ತಾರಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.
ಈ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ PDO ಪತ್ತಾರ್ ದೂರು ಕೊಟ್ಟಿದ್ದರು. ದೂರಿನ ಅನ್ವಯ ಆರೋಪಿ ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.