ಸ್ಮಾರ್ಟ್ ಫೋನ್ ಇಲ್ಲದೆ ಇದ್ದರೆ ಆಗ ಜೀವನವೇ ಇಲ್ಲವೆನ್ನುವಂತಹ ಪರಿಸ್ಥಿತಿಯು ಇಂದಿನ ಯುಗದಲ್ಲಿದೆ. ಬೆಳಗ್ಗೆ ಬೇಗ ಎದ್ದೇಳಲು ಅಲರಾಂನಿಂದ ಹಿಡಿದು ರಾತ್ರಿ ಮಲಗುವ ತನಕ ಪ್ರತಿಯೊಂದು ವಿಚಾರಕ್ಕೂ ನಾವು ಸ್ಮಾರ್ಟ್ ಫೋನ್ ಅವಲಂಬಿಸಿದ್ದೇವೆ. ಅದರಲ್ಲೂ ಯಾವುದೇ ವಿಚಾರವು ನಮಗೆ ತಿಳಿಯದೆ ಇದ್ದರೆ ಆಗ ನಾವು ಇಂಟರ್ನೆಟ್ ಗೆ ಹೋಗಿ ಹುಡುಕಲು ಆರಂಭಿಸುತ್ತೇವೆ. ಇದು ನಮ್ಮ ಜ್ಞಾಪಕ ಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡಿದೆ.
ಸ್ಮಾರ್ಟ್ ಫೋನ್ ಎನ್ನುವುದು ನಮ್ಮ ಗುಲಾಮರನ್ನಾಗಿ ಮಾಡಿದೆ ಎಂದರೆ ತಪ್ಪಾಗದು. ಇಂದಿನ ಯುವಜನತೆಯು ಇದನ್ನು ಅತಿಯಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದಂತೆ ಅನುಕೂಲದ ಜೊತೆ ಅಪಾಯವೂ ಹೆಚ್ಚು. ನೋಡಿ ನೀವು ಸ್ಮಾರ್ಟ್ ಫೋನ್ ಬಳಸೋ ಮುನ್ನ ಕೆಲವೊಂದು ಸೆಟ್ಟಿಂಗ್ಸ್ ಆಫ್ ಮಾಡಿ.
ನಿಮ್ಮ ಪ್ರತಿಯೊಂದು ಮಾತನ್ನೂ ನಿಮ್ಮ ಫೋನ್ ಕೇಳಿಸಿಕೊಳ್ಳುತ್ತದೆ. ನಿಮ್ಮ ಬಗ್ಗೆ ನಿಮ್ಮವರಿಗೆ ಚೆನ್ನಾಗಿ ತಿಳಿಯದೇ ಹೋದರೂ ನಿಮ್ಮ ಫೋನ್ಗೆ ಎಲ್ಲವೂ ತಿಳಿದಿರುತ್ತದೆ. ನಿಮಗೆ ಏನು ಬೇಕು, ಏನು ಇಷ್ಟ, ನೀವು ಎಲ್ಲಿಗೆ ಹೋಗಿದ್ದೀರಿ? ನಿಮಗೆ ಯಾರ್ಯಾರು ಮೆಸೇಜ್ ಮಾಡುತ್ತಾರೆ, ನೀವು ಸೀಕ್ರೇಟ್ ಆಗಿ ಏನನ್ನು ಮಾಡುತ್ತೀರಿ… ಹೀಗೆ ಪ್ರತಿಯೊಂದು ಕೂಡ ನಿಮ್ಮ ಮೊಬೈಲ್ಗೆ ಗೊತ್ತಿರುತ್ತದೆ.
ಹೀಗೆಂದರೆ ಬಹುಶಃ ಕೆಲವರು ನಂಬಲಿಕ್ಕಿಲ್ಲ. ಆದರೆ ಸುಮ್ಮನೇ ಯಾವುದೋ ಒಂದು ವಿಷಯ ಮಾತನಾಡಿ ನೋಡಿ ಇಂಟರ್ನೆಟ್ ಆನ್ ಮಾಡಿ, ಇಲ್ಲವೇ ಗೂಗಲ್ ಓಪನ್ ಮಾಡಿ. ಆಗ ನೋಡಿ, ನೀವು ಮಾತನಾಡಿರುವ ವಿಷಯ ಅಲ್ಲಿ ದಾಖಲಾಗಿರುತ್ತದೆ, ಇಲ್ಲವೇ ಏನಾದರೂ ವಸ್ತು ಇಷ್ಟಪಟ್ಟಿದ್ದರೆ, ಅದೇ ವಸ್ತುವಿನ ಜಾಹೀರಾತು ಕೂಡ ಕಾಣಿಸಿಕೊಳ್ಳುತ್ತದೆ. ಕೆಲವರ ಗಮನಕ್ಕೆ ಇದು ಹಲವು ಬಾರಿ ಬಂದಿರಬಹುದು, ಆದರೆ ಅದರ ಬಗ್ಗೆ ಅಷ್ಟು ಲಕ್ಷ್ಯ ಕೊಡದೇ ಹೋಗಬಹುದು. ಆದರೆ ಇದು ತುಂಬಾ ಡೇಂಜರ್. ನಿಮ್ಮ ಜುಟ್ಟು ನಿಮ್ಮ ಮೊಬೈಲ್ ಕೈಯಲ್ಲಿ ಕೊಟ್ಟಂತೆ ಇದು. ನಿಮ್ಮ ತೀರಾ ಖಾಸಗಿ ವಿಷಯಗಳನ್ನೂ ಇದು ಸಂಗ್ರಹಿಸಿಟ್ಟುಕೊಳ್ಳುತ್ತದೆ. ನಿಮ್ಮ ವಿಷಯವನ್ನು ತಿಳಿದು ಮೋಸ ಮಾಡುವ ಛಾನ್ಸ್ಸ್ ಕೂಡ ಇರುತ್ತದೆ. ಸೈಬರ್ ಕ್ರೈಮ್ಗೆ ಬಲಿಯಾಗಲು ಇದೂ ಒಂದು ದಾರಿಯಾದರೂ ಆಗಬಹುದು. ಆದ್ದರಿಂದ ಈ ಕೂಡಲೇ ಕೆಲವೊಂದು ಸೆಟ್ಟಿಂಗ್ಸ್ಗಳನ್ನು ಆಫ್ ಮಾಡಿಕೊಳ್ಳಬೇಕು.
ಸಾಮಾನ್ಯವಾಗಿ ಯಾವುದಾದರೂ ಆಯಪ್ ಇನ್ಸ್ಟಾಲ್ ಮಾಡಿದಾಗ, ಅಲ್ಲಿ ಬರುವುದನ್ನು ಯಾವುದನ್ನೂ ಓದದೇ allow ಕೊಟ್ಟಿರುತ್ತೇವೆ. ಇದು ಕೊಡದೇ ಹೋದರೆ ಆಯಪ್ ಓಪನ್ ಆಗುವುದಿಲ್ಲ. ಆದರೆ ಎಲ್ಲಾ ಆಯಪ್ಗಳಿಗೂ ಇದು ಬೇಡ. ಆಟೊಮ್ಯಾಟಿಕ್ ಆಗಿ ನಿಮ್ಮ ಮೊಬೈಲ್ನಲ್ಲಿ ಇರುವ ಎಲ್ಲಾ ಆಯಪ್ಗಳಲ್ಲಿಯೂ ಇದು ಆನ್ ಆಗಿರುತ್ತದೆ. ನಿಮ್ಮ ಡಿಟೇಲ್ಸ್ ಸಂಗ್ರಹಿಸುವಲ್ಲಿ ಇದು ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಇದು ಹೊರತುಪಡಿಸಿ ಇನ್ನೂ ಕೆಲವು ಸೆಟ್ಟಿಂಗ್ಗಳನ್ನು ನೀವು ಆಫ್ ಮಾಡಿಕೊಂಡರೆ, ಭವಿಷ್ಯದಲ್ಲಿ ಅದು ನಿಮಗೆ ಒಳಿತು. ಅದರ ಎಲ್ಲಾ ಡಿಟೇಲ್ಸ್ಗಳನ್ನು ಈ ಕೆಳಗೆ ನೀಡಲಾಗಿದೆ.
ಪರ್ಸನಲೈಸ್ಡ್ ಡೇಟಾ ಶೇರಿಂಗ್ ಆಫ್ ಮಾಡುವ ವಿಧಾನ:
<span;>- ಫೋನ್ನ ಸೆಟ್ಟಿಂಗ್ಗೆ ಹೋಗಿ.
<span;>- ಗೂಗಲ್ ಮೇಲೆ ಕ್ಲಿಕ್ ಮಾಡಿ
<span;>- ಆಲ್ ಸರ್ವೀಸ್ ಕ್ಲಿಕ್ ಮಾಡಿ ಪ್ರೈವಸಿ ಆಯಂಡ್ ಸೆಕ್ಯುರಿಟಿ ಮೇಲೆ ಕ್ಲಿಕ್ ಮಾಡಿ.
<span;>- ಪರ್ಸನಲೈಸ್ಡ್ ಯೂಸ್ಡ್ ಶೇರ್ಡ್ ಡೇಟಾದ ಮೇಲೆ ಕ್ಲಿಕ್ ಮಾಡಿ
<span;>- ಇದಾವುದೂ ನಿಮಗೆ ಅಗತ್ಯವಿರುವುದಿಲ್ಲ. ಆದರೆ ಎಲ್ಲವೂ ಆನ್ ಆಗಿರುತ್ತದೆ. ಅವುಗಳನ್ನು ಆಫ್ ಮಾಡಿ.
ಯೂಸೇಜ್ ಆಯಂಡ್ ಡಯೋಗ್ನಾಸ್ಟಿಕ್ ಆಫ್ ಮಾಡುವ ವಿಧಾನ: (ನಿಮ್ಮ ಮಾಹಿತಿಗಳನ್ನು ಗೂಗಲ್ಗೆ ಸೆಟ್ಟಿಂಗ್ ಇದಾಗಿದೆ. ಇದನ್ನು ಆಫ್ ಮಾಡಲು…)
<span;>- ಫೋನ್ನ ಸೆಟ್ಟಿಂಗ್ಗೆ ಹೋಗಿ.
<span;>- ಗೂಗಲ್ ಮೇಲೆ ಕ್ಲಿಕ್ ಮಾಡಿ
<span;>- ಆಲ್ ಸರ್ವೀಸ್ ಕ್ಲಿಕ್ ಮಾಡಿ ಪ್ರೈವಸಿ ಆಯಂಡ್ ಸೆಕ್ಯುರಿಟಿ ಮೇಲೆ ಕ್ಲಿಕ್ ಮಾಡಿ.
<span;>- ಯೂಸೇಜ್ ಆಯಂಡ್ ಡಯಾಗ್ನೆಸ್ಟಿಕ್ ಕ್ಲಿಕ್ ಮಾಡಿ
<span;>- ಯೂಸೇಜ್ ಆಯಂಡ್ ಡಯಾಗ್ನೆಸ್ಟಿಕ್ ಆಫ್ ಮಾಡಿ
ನೀವು ಅಂದುಕೊಂಡ ಜಾಹೀರಾತು ಬರುವುದನ್ನು ನಿಲ್ಲಿಸಲು ಹಾಗೂ ನಿಮ್ಮ ಸಂಭಾಷಣೆ ಕೇಳುವುದನ್ನು ನಿಲ್ಲಿಸಲು..
<span;>- ಫೋನ್ನ ಸೆಟ್ಟಿಂಗ್ಗೆ ಹೋಗಿ.
<span;>- ಗೂಗಲ್ ಕ್ಲಿಕ್ ಮಾಡಿ
<span;>- ಆಲ್ ಸರ್ವೀಸಸ್ ಓಪನ್ ಮಾಡಿ
<span;>- ಅಲ್ಲಿ ಆಯಡ್ಸ್ ಇರುವುದರ ಮೇಲೆ ಕ್ಲಿಕ್ ಮಾಡಿ
<span;>- ರಿಸೆಟ್ ಅಡ್ವೈಟಿಸಿಂಗ್ ಐಡಿ ಕ್ಲಿಕ್ ಮಾಡಿ ಕನ್ಫರ್ಮ್ ಮಾಡಿ
<span;>- ಡಿಲೀಟ್ ಅಡ್ವೈಟೈಸಿಂಗ್ ಐಡಿ ಡಿಲೀಟ್ ಮಾಡಿ
.