ಬೆಂಗಳೂರು:- ರಾಜಧಾನಿ ಬೆಂಗಳೂರು ಮಾರುಕಟ್ಟೆಯಲ್ಲಿ ಬೀನ್ಸ್, ಈರುಳ್ಳಿ ಸೇರಿ ತರಕಾರಿ ಬೆಲೆ ಗಣನೀಯ ಇಳಿಕೆ ಆಗಿದೆ.
ಡಿಕೆಶಿ ನಟ್ಟು ಬೋಲ್ಟ್ ಟೈಟ್ ಮಾಡ್ತೀವಿ: DCM ಬಗ್ಗೆ CT ರವಿ ಹಿಂಗೇಳಿದ್ಯಾಕೆ!?
ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಸೊಪ್ಪು-ತರಕಾರಿಗಳ ದರ ಗಗನಕ್ಕೇರುತ್ತಿತ್ತು. ಒಂದೆಡೆ ನೀರಿನ ಕೊರತೆ, ಮತ್ತೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತರಕಾರಿ ಬೆಳೆಗಳಿಗೆ ಹೊಡೆತ ಬೀಳುತ್ತಿತ್ತು. ಆದರೆ, ಈ ಬಾರಿ ಈವರೆಗೆ ಈ ಸಮಸ್ಯೆ ಉಂಟಾಗಿಲ್ಲ.
ಬೀನ್ಸ್, ಬದನೆಕಾಯಿ, ಮೂಲಂಗಿ, ಟೊಮೇಟೊ, ಈರುಳ್ಳಿ ಸೇರಿದಂತೆ ಬಹುತೇಕ ತರಕಾರಿಗಳ ದರದಲ್ಲಿ ಇಳಿಕೆಯಾಗಿದೆ. ಸೊಪ್ಪುಗಳ ದರವೂ ಇಳಿಕೆಯಾಗಿದೆ. ಶುಂಠಿ ಕೆ.ಜಿ.ಗೆ 30 ರೂ., ಗೆಡ್ಡೆಕೋಸು, ಮೂಲಂಗಿ 15-20 ರೂ., ಬಟಾಣಿ-4 ರೂ.ಗೆ ಇಳಿದಿದೆ. ತಾಪಮಾನ ಅಧಿಕವಾಗಿದ್ದರೂ ಬೆಳೆಗಳಿಗೆ ರೋಗ ಬಾಧೆಗಳಿಲ್ಲ. ಜತೆಗೆ, ತಮಿಳುನಾಡು, ಆಂಧ್ರ ಭಾಗಗಳಿಂದಲೂ ಸ್ವಲ್ಪ ಮಟ್ಟಿಗೆ ತರಕಾರಿಗಳು ಬರುತ್ತಿವೆ. ನಾಸಿಕ್ನಿಂದ ಟೊಮೆಟೊ ಬರುತ್ತಿದೆ
ಕ್ಯಾರಟ್ ಬೆಳೆ ಇಳುವರಿಯಿಲ್ಲದಿರುವುದರಿಂದ ಬೆಲೆಗಳು ಏರುಗತಿಯಲ್ಲಿಸಾಗುತ್ತಿದ್ದು, ಕೆಜಿ ಗೆ 60 – 70 ರೂ. ಇದೆ.
ಹಾಪ್ಕಾಮ್ಸ್ನಲ್ಲಿ ತರಕಾರಿ ದರಗಳು
ಬೀನ್ಸ್ – 50 ರೂ.
ಬದನೆಕಾಯಿ (ಬಿಳಿ) – 33 ರೂ.
ಬದನೆಕಾಯಿ (ಗುಂಡು) – 25 ರೂ.
ದಪ್ಪ ಮೆಣಸಿನಕಾಯಿ – 50 ರೂ.
ಗೋರಿಕಾಯಿ – 50 ರೂ.
ಮೂಲಂಗಿ – 24 ರೂ.
ನುಗ್ಗೆಕಾಯಿ – 122 ರೂ.
ಬೀಟ್ರೂಟ್ – 25 ರೂ.
ಗೆಡ್ಡೆಕೋಸು – 25 ರೂ.
ಕ್ಯಾರಟ್ ಡೆಲ್ಲಿ – 88 ರೂ.
ಟೊಮೇಟೊ – 20 ರೂ.
ಸೋರೆಕಾಯಿ – 26 ರೂ.
ಈರುಳ್ಳಿ – 53 ರೂ.
ಏಲಕ್ಕಿ ಬಾಳೆ – 99 ರೂ.
ಪಚ್ಚಬಾಳೆ – 43 ರೂ.