ವಿಜಯನಗರ : ವಿಜಯನಗರದಲ್ಲಿ ಗತವೈಭವ ಮರುಕಳಿಸಿದ್ದು, ಐತಿಹಾಸಿಕ ಹಂಪಿ ಉತ್ಸವಕ್ಕೆ ಸಕಲ ಸಿದ್ದತೆ ನಡೆಸಿದೆ. ಹಂಪಿ ಉತ್ಸವದ ಪ್ರಯುಕ್ತ ಕಮಲಾಪುರ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ವಿಶೇಷ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ರಿಬ್ಬನ್ ಕಟ್ ಮಾಡಿ ಬೋಟಿಂಗ್ ವ್ಯವಸ್ಥೆ ಉದ್ಘಾಟಿಸಿದ ಸಚಿವ ಜಮೀರ್ ಅಹ್ಮದ್ ಅವರು ಬೋಟಿಂಗ್ ರೈಡ್ ಮಾಡಿದರು.
ಹಂಪಿ ಉತ್ಸವಕ್ಕೆ ಮುಕ್ತಿಧಾಮ, ಇಂದಿರಾನಗರದ ವಾಸಿಗಳಿಗೆ ವಿವಿಐಪಿ ಪಾಸ್ ವಿತರಣೆ
ಈ ವೇಳೆ ಸಚಿವ ಜಮೀರ್ ಅವರಿಗೆ ಶಾಸಕ ಹೆಚ್.ಆರ್ ಗವಿಯಪ್ಪ, ಶಿರಾಜ್ ಶೇಕ್ ಸಹ ಜೊತೆಯಾದರು. ಸಚಿವ ಜಮೀರ್, ಶಾಸಕ ಗವಿಯಪ್ಪ ಅವರು ಒಂದೇ ಬೋಟ್ ನಲ್ಲಿ ಕುಳಿತು ಸಂಚಾರ ಮಾಡಿದ್ದು ವಿಶೇಷವಾಗಿತ್ತು. ವಿಜಯನಗರ ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಎಂ.ಎಸ್ ದಿವಾಕರ್, ಎಸ್ಪಿ ಶ್ರೀಹರಿಬಾಬು ಉಪಸ್ಥಿತರಿದ್ದರು.