ಬೆಂಗಳೂರು: ಗೃಹ ಸಚಿವರ ಮನೆಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಅಧಿಕಾರಿ, ಸಿಬ್ಬಂದಿ ಗೃಹ ಸಚಿವರ ಮನೆಗೆ ಹೋಗುವಂತಿಲ್ಲ ಎಂದು ಡಿಜಿ /ಐಜಿಪಿ ಅಲೋಕ್ ಮೋಹನ್ ರಿಂದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮೆಮೋ ಕಳುಹಿಸಲಾಗಿದೆ.
ವರ್ಗಾವಣೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ನಾನಾ ಕಡೆಗಳಿಂದ ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯು ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡುತ್ತಿದ್ದರು.
ದಿನೇ ದಿನೆ ಭೇಟಿಯಾಗುವವರ ಸಂಖ್ಯೆ ಅಧಿಕವಾದ ಹಿನ್ನೆಲೆಯಲ್ಲಿ ಅನುಮತಿಯಿಲ್ಲದೆ ಹೋಮ್ ಮಿನಿಸ್ಟರ್ ಅವರನ್ನು ಖುದ್ದು ಭೇಟಿಯಾಗಬಾರದು ಎಂದು ಡಿಜಿಪಿ ಸೂಚಿಸಿದ್ದಾರೆ.