2025 ರ ಚಾಂಪಿಯನ್ಸ್ ಟ್ರೋಫಿ ಒಂದು ಸಂಚಲನವನ್ನು ಸೃಷ್ಟಿಸಿದೆ. ಗ್ರೂಪ್ ‘ಬಿ’ಯಲ್ಲಿ ದುರ್ಬಲ ತಂಡವಾಗಿದ್ದ ಅಫ್ಘಾನಿಸ್ತಾನ, ಪ್ರಶಸ್ತಿ ವಿಜೇತ ಇಂಗ್ಲೆಂಡ್ಗೆ ಅನಿರೀಕ್ಷಿತ ಆಘಾತ ನೀಡಿತು. ಇಂಗ್ಲೆಂಡ್ ‘ಬಿ’ ಗುಂಪಿನಿಂದ ಹೊರಬಿದ್ದ ಮೊದಲ ತಂಡವಾಯಿತು. ಬುಧವಾರ ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಕೊನೆಯವರೆಗೂ ರೋಮಾಂಚಕಾರಿಯಾಗಿತ್ತು. ಈ ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲುತ್ತದೆ ಎಂದು ತೋರಿದರೂ, ಅಫ್ಘಾನಿಸ್ತಾನ ಕೊನೆಯಲ್ಲಿ ಅದ್ಭುತ ಪ್ರದರ್ಶನ ನೀಡಿ, ಒತ್ತಡವನ್ನು ತಡೆದುಕೊಳ್ಳಿತು. ಅದರಲ್ಲೂ ಅಜ್ಮತುಲ್ಲಾ ಒಮರ್ಜೈ ಅದ್ಭುತ ಬೌಲಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು ಮನೆಗೆ ಕಳುಹಿಸಿದರು.
ಮರೆತೂ ಕೂಡ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಬೇಡಿ: ಹಣದ ಸಮಸ್ಯೆ ಎದುರಾಗಬಹುದು..!
ಹೌದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 7 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಕೊನೆಯವರೆಗೂ ಜಯಗಳಿಸಲು ಹೋರಾಡಿತು. ಅಂತಿಮವಾಗಿ 49.5 ಓವರ್ಗಳಲ್ಲಿ 317 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಬಿ ಗುಂಪಿನಲ್ಲಿ ಮೊದಲ ಜಯದೊಂದಿಗೆ ಅಫ್ಘಾನಿಸ್ತಾನ ಈಗ 2 ಅಂಕ ಸಂಪಾದಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಎರಡು ತಂಡಗಳಿಗೆ ಒಂದೊಂದು ಅಂಕವನ್ನು ನೀಡಲಾಗಿದೆ. ಹೀಗಾಗಿ ಈ ಎರಡು ತಂಡಗಳು 3 ಅಂಕ ಸಂಪಾದಿಸಿದ್ದರೂ ರನ್ ರೇಟ್ ಚೆನ್ನಾಗಿರುವ ಕಾರಣ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ.
ಮುಂದೆ ಆಫ್ಘಾನಿಸ್ತಾನ ಆಸ್ಟ್ರೇಲಿಯಾವನ್ನು ಎದುರಿಸಲಿದ್ದರೆ ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ವಿರುದ್ಧ ಆಡಲಿದೆ. ಹೀಗಾಗಿ ಮೂರು ತಂಡಗಳಿಗೆ ಜಯ ಮುಖ್ಯ. ಒಂದು ವೇಳೆ ಮುಂದೆ ನಡೆಯಲಿರುವ ಎರಡೂ ಪಂದ್ಯ ಮಳೆಯಿಂದ ರದ್ದಾದರೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಲಿದೆ ಅಫ್ಘಾನಿಸ್ತಾನದ ಕನಸು ಭಗ್ನವಾಗಲಿದೆ.
ಆರಂಭದಲ್ಲೇ ಆಘಾತ: 30 ರನ್ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿದ್ದರೆ 133 ರನ್ಗಳಿಸುವಷ್ಟರಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಜೋ ರೂಟ್ಗೆ ನಾಯಕ ಜೋಸ್ ಬಟ್ಲರ್ ಸಾಥ್ ನೀಡಿದರು. ಇವರಿಬ್ಬರು 5ನೇ ವಿಕೆಟಿಗೆ 91 ಎಸೆತಗಳಲ್ಲಿ 83 ರನ್ ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು.
ಜೋಸ್ ಬಟ್ಲರ್ 38 ರನ್ (42 ಎಸೆತ, 2 ಸಿಕ್ಸರ್) ಸಿಡಿಸಿ ಔಟಾದರೆ ತಂಡದ ಮೊತ್ತ 287 ರನ್ ಆದಾಗ 120 ರನ್ (111 ಎಸೆತ, 11 ಬೌಂಡರಿ, 1 ಸಿಕ್ಸ್) ಹೊಡೆದಿದ್ದ ಜೋ ರೂಟ್ ಕ್ಯಾಚ್ ನೀಡಿ ನಿರ್ಗಮಿಸಿದರು. ಜೋ ರೂಟ್ ಔಟಾದರೂ ಜೇಮೀ ಓವರ್ಟನ್ ಬ್ಯಾಟ್ ಬೀಸುತ್ತಿದ್ದರು.
ಯಾವಾಗ ಜೇಮೀ ಓವರ್ಟನ್ 32 ರನ್(28 ಎಸೆತ, , 3 ಬೌಂಡರಿ) ಔಟಾದರೋ ಬೆನ್ನಲ್ಲೇ 14 ರನ್ ಗಳಿಸಿದ್ದ ಜೋಫ್ರಾ ಆರ್ಚರ್ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 317 ರನ್ಗಳಿಗೆ ಇಂಗ್ಲೆಂಡ್ ಸರ್ವಪತನ ಕಂಡಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಆರಂಭಿಸಿದ್ದ ಆಫ್ಘಾನಿಸ್ತಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತ್ತು. 37 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 40 ರನ್(67 ಎಸೆತ), ಅಜ್ಮತುಲ್ಲಾ ಒಮರ್ಜಾಯ್ 41 ರನ್ (31 ಎಸೆತ, 1 ಬೌಂಡರಿ, 3 ಸಿಕ್ಸರ್), ಮೊಹಮ್ಮದ್ ನಬಿ 40 ರನ್ (24 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಪರಿಣಾಮ ತಂಡ 300 ರನ್ಗಳ ಗಡಿ ದಾಟಿತು. ಜದ್ರಾನ್ ಮತ್ತು ನಬಿ 55 ಎಸೆತಗಳಲ್ಲಿ 111 ರನ್ ಜೊತೆಯಾಟವಾಡಿ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು.
177 ರನ್ (146 ಎಸೆತ, 12 ಬೌಂಡರಿ, 6 ಸಿಕ್ಸರ್) ಹೊಡೆದ ಜದ್ರಾನ್ 50ನೇ ಓವರಿನ ಮೊದಲ ಎಸೆತದಲ್ಲಿ ಔಟಾದರು. 65 ಎಸೆತದಲ್ಲಿ ಅರ್ಧಶತಕ ಹೊಡೆದ ಜದ್ರಾನ್ 106 ಎಸೆತಗಳಲ್ಲಿ ಶತಕ ಭಾರಿಸಿದರು. 134 ಎಸೆತಗಳಲ್ಲಿ 150 ರನ್ ಚಚ್ಚಿದರು.