ಬೆಂಗಳೂರು: ರಾಜ್ಯಾಧ್ಯಕ್ಷರ ಬದಲಾವಣೆಗೆ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ ಸುಮ್ಮನೆ ಏನೂ ಕೂತಿಲ್ಲ. ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ರೆಬೆಲ್ಸ್ ಟೀಂಗೆ ಎಷ್ಟೇ ಏನೇ ಹಿನ್ನಡೆಯಾದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುತ್ತಿಲ್ಲ.
ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಕೊಟ್ಟರೂ ಡೋಂಟ್ಕೇರ್ ಅಂತಿದ್ದಾರೆ. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲಿಂಗಾಯತ ಮುಖಂಡರನ್ನು ಒಳಗೊಂಡು 100 ಮಂದಿಯ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ಪ್ಲ್ಯಾನ್ ಮಾಡುತ್ತಿದ್ದಾರೆ.
ಮರೆತೂ ಕೂಡ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಬೇಡಿ: ಹಣದ ಸಮಸ್ಯೆ ಎದುರಾಗಬಹುದು..!
ಒಂದು ಕಲ್ಲು ಎರಡು ಗುರಿ ಮೂಲಕ ವಿಜಯೇಂದ್ರ ವಿರುದ್ಧ ಯತ್ನಾಳ್ ಈ ಬಾರಿ ಬ್ರಹ್ಮಾಸ್ತ್ರವನ್ನೇ ಹೂಡಿದ್ದಾರೆ. ವಿಜಯೇಂದ್ರ ಹಠಾವೋ ಆಂದೋಲನ ತೀವ್ರಗೊಳಿಸುವುದು, ಲಿಂಗಾಯತರು ವಿಜಯೇಂದ್ರ ವಿರುದ್ಧ ಇದ್ದಾರೆಂಬ ಸಂದೇಶ ರವಾನಿಸೋದು ಯತ್ನಾಳ್ ಅವರ ಉದ್ದೇಶ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದರೆ ಲಿಂಗಾಯತರು ಒಗ್ಗೂಡುವುದಿಲ್ಲ.
ವಿಜಯೇಂದ್ರ ಸಾರಥ್ಯದಲ್ಲಿ ಸಮುದಾಯ ಪಕ್ಷದ ಬೆಂಬಲಕ್ಕೆ ನಿಲ್ಲುವುದೂ ಅನುಮಾನ. ಸಮುದಾಯ ಚದುರಿ ಹೋಗಲಿದೆ. ಕಾಂಗ್ರೆಸ್ ಹೈಜಾಕ್ ಅಪಾಯವೂ ಇದೆ ಎಂದು ವರಿಷ್ಠರಿಗೆ ಮನದಟ್ಟು ಮಾಡಿಸುವ ಕಸರತ್ತು ನಡೆಸುತ್ತಿದ್ದಾರೆ ಯತ್ನಾಳ್.
ಇದಕ್ಕಾಗಿ 100 ಜನ ಲಿಂಗಾಯತರ ನಿಯೋಗ ದೆಹಲಿಗೆ ಕೊಂಡೊಯ್ಯಲು ಯತ್ನಾಳ್ ಪ್ಲ್ಯಾನ್ ರೂಪಿಸಿದ್ದಾರೆ.ಶಿವರಾತ್ರಿ ಬಳಿಕ ಸಾಧ್ಯವಾದರೆ ಈ ವಾರಾಂತ್ಯದಲ್ಲೇ ದೆಹಲಿ ಪರೇಡ್ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯೇಂದ್ರ ಬೆಂಬಲಕ್ಕೆ ಲಿಂಗಾಯತರು ಇಲ್ಲ ಅನ್ನೋದನ್ನ ಹೈಕಮಾಂಡ್ಗೆ ಮನವರಿಕೆ ಮಾಡಿಕೊಡಲು ನಿಯೋಗ ಕೊಂಡೊಯ್ಯಲಾಗುತ್ತಿದೆ.