ಬೆಂಗಳೂರು: ಮಹಾಶಿವರಾತ್ರಿ ದಿನದಂದೇ ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಕೊಂದು, ಪತಿ ನೇಣಿಗೆ ಶರಣಾಗಿರುವ ಘಟನೆ ತಿಗಳರಪಾಳ್ಯ ಮುಖ್ಯ ರಸ್ತೆಯ ನ್ಯೂ ಇಂಡಿಯನ್ ಸ್ಕೂಲ್ ಬಳಿ ಘಟನೆ ನಡೆದಿತ್ತು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್ ಪುರ ಮೂಲದ ಸುರೇಶ್, ತನ್ನ ಸೋದರ ಸಂಬಂಧಿ ಮಮತಾಳನ್ನ ಮದುವೆಯಾಗಿದ್ದ. ಹದಿಮೂರ ವರ್ಷಗಳ ಹಿಂದಷ್ಟೇ ಮದ್ವೆಯಾಗಿದ್ದ. ಆದ್ರೆ, ಸುರೇಶನ ಕಾಮ ಮಿತಿ ಮೀರಿದ್ದು, ರಾತ್ರಿ ಬೆಳಗ್ಗೆ ಎನ್ನದೇ ಸಹಕರಿಸುವಂತೆ ಪೀಡಿಸುತ್ತಿದ್ದ. ಇದಕ್ಕೆ ವಿಚಾರಕ್ಕೆ ನಡೆದ ಜಗಳ ದಂಪತಿ ಸಾವಿನಲ್ಲಿ ಅಂತ್ಯವಾಗಿದೆ.
ಹದಿಮೂರು ವರ್ಷಗಳ ಹಿಂದೆ ಮದ್ವೆಯಾಗಿದ್ದ ಸುರೇಶ್ ಹಾಗೂ ಮಮತಾಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮುತ್ತಿನಂತ ಎರಡು ಗಂಡು ಮಕ್ಕಳು ಕೂಡ ಆಗಿದ್ವು.. ಒಬ್ಬನಿಗೆ ಎಂಟು ವರ್ಷ ಮತ್ತೋರ್ವನಿಗೆ ಆರು ವರ್ಷ. ಬೆಂಗಳೂರಿನ ಪೀಣ್ಯಾ ಎರಡನೇ ಹಂತದ ಸಮೀಪದ ತಿಗಳರ ಪಾಳ್ಯದ ಕಾಳಿಕಾ ನಗರದ ಮನೆಯೊಂದರಲ್ಲಿ ಬಾಡಿಗೆ ವಾಸವಾಗಿದ್ದರು. ಸುರೇಶ್ ಆಟೋ ಓಡಿಸುತ್ತಿದ್ದರೆ, ಪತ್ನಿ ಮಮತಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
ಮರೆತೂ ಕೂಡ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಬೇಡಿ: ಹಣದ ಸಮಸ್ಯೆ ಎದುರಾಗಬಹುದು..!
ಆದ್ರೆ ಗಂಡ ಮಧ್ಯವೆಸನಿಯಾಗಿ ಕಳೆದ ಕೆಲ ವರ್ಷಗಳಿಂದ ಪತ್ನಿಗೆ ಕಾಮದ ವಿಷಯಕ್ಕೆ ಕಿರುಕುಳ ನೀಡುತ್ತಿದ್ದನಂತೆ. ಸಾಲದಕ್ಕೆ ಮೊಬೈಲ್ ನಲ್ಲಿ ನಗ್ನ ವಿಡಿಯೋಗಳನ್ನ ತೋರಿಸಿ ಅದರಂತೆ ಸಹಕರಿಸು ಎಂದು ಒತ್ತಾಯ ಮಾಡುತ್ತಿದ್ದನಂತೆ. ಅಲ್ಲದೇ ಆಟೋ ಸರಿಯಾಗಿ ದುಡಿಯದೆ ಮನೆಗೆ ಆರ್ಥಿಕ ಸಹಾಯ ಮಾಡದೇ ಕುಡಿಯುತ್ತಿದ್ದ, ಈ ಸಂಬಂಧ ದಂಪತಿಗಳ ನಡುವೆ ಜಗಳವಾಗಿದ್ದು, ಹಲವು ಬಾರಿ ಇಬ್ಬರ ಕುಟುಂಬಸ್ಥರು ರಾಜಿ ಸಂಧಾನ ಮಾಡಿದ್ದರು. ಆದರೂ ಇಬ್ಬರ ಮಧ್ಯೆ ಜಗಳ ನಿಂತಿಲ್ಲ,
ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದ ಮಮತಾ ಡಿವೋರ್ಸ್ ಕೊಡಲು ಮುಂದಾಗಿದ್ದಳು. ಆದ್ರೆ ಇವತ್ತು ಬೆಳಗ್ಗೆ ಪತಿ ಪತ್ನಿ ಮಧ್ಯೆ ಜಗಳ ಶುರುವಾಗಿದ್ದು, ಆರು ವರ್ಷದ ಮಗನ ಮುಂದೆಯೇ ಜಗಳ ತೆಗೆದಿದ್ದ ಸುರೇಶ್ ಪತ್ನಿ ಮಮತಾ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೂ ಸಹ ನೇಣಿಗೆ ಶರಣಾಗಿದ್ದಾನೆ. ಇನ್ನು ಎಲ್ಲವನ್ನೂ ಕಣ್ಣಮುಂದೆಯೇ ನೋಡಿದ್ದ ಆರು ವರ್ಷದ ಮಗು ಕೂಡಲೇ ಅಕ್ಕಪಕ್ಕದ ಮನೆಯವ್ರಿಗೆ ಹೇಳಿದೆ.. ಸ್ಥಳೀಯರು ಬ್ಯಾಡರಹಳ್ಳಿ ಪೊಲೀಸ್ರಿಗೆ ಮಾಹಿತಿ ನೀಡಿದ್ರು.. ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.