ಬೆಂಗಳೂರು:- ಬ್ಯಾನ್ ಆಗುತ್ತಾ ಕರಿದ ಹಸಿರು ಬಟಾಣಿ ಎಂದು ಇದೀಗ ಜನ ಕೇಳಲು ಶುರು ಮಾಡಿದ್ದಾರೆ. ಬಟಾಣಿ.. ಬಟಾಣಿ.. ಕರಿದ ಹಸಿರು ಬಟಾಣಿ. ಅತೀ ಕಡಿಮೆ ಬೆಲೆಗೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಕೂಡ ಫೇವರೇಟ್. ಆದ್ರೆ ಇದೀಗ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಒಳಗೊಂಡಿರುವ ಶಂಕೆ ಶುರುವಾಗಿದೆ.
ಗೋಬಿ ಆಯ್ತು, ಪಾನಿಪುರಿ ಆಯ್ತು, ಕಬಾಬ್ ಆಯ್ತು.. ಕಾಟನ್ ಕ್ಯಾಂಡಿನೂ ಆಯ್ತು.. ಇದೀಗ ಬಟಾಣಿ ಸರದಿ. ಕೂರ್ಮಾ ಆಗಲಿ, ಯಾವುದೇ ತಿಂಡಿ ಮಾಡುವಾಗಲು ಬಟಾಣಿ ಬಳಸುತ್ತಾರೆ. ಬಡವರ ಫೆವರೇಟ್ ಬಟಾಣಿಗೆ ಇದೀಗ ಬ್ಯಾನ್ ಬಿಸಿ ತಟ್ಟುತ್ತಾ ಅನ್ನೋ ಪ್ರಶ್ನೆ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದೆ? ಹಾಗಿದ್ರೆ ಹೀಗೊಂದು ಪ್ರಶ್ನೆ ಮೂಡೋದಕ್ಕೆ ಕಾರಣ ಇಲ್ಲಿದೆ ನೋಡಿ.
ಈ ಬಗ್ಗೆ ಹಲವು ಸುದ್ದಿಗಳೂ ಕೂಡಾ ವೈರಲ್ ಆಗುತ್ತಿದೆ. ಈ ಕರಿದ ಹಸಿರು ಬಟಾಣಿಯಲ್ಲಿ ಯತೇಚ್ಛವಾಗಿ ಕೃತಕ ಬಣ್ಣ ಬಳಕೆ ಮಾಡುವ ಗಂಭೀರ ಆರೋಪವೂ ಕೇಳಿಬರುತ್ತಿದೆ. ಈ ಸಂಬಂಧ ಸಾರ್ವಜನಿಕರು ಆಗಾಗ ತಮ್ಮ ದೂರುಗಳನ್ನು ಹೇಳ್ತಾನೆ ಇದ್ದರು. ಸದ್ಯ ಈ ಬಗ್ಗೆ ಒಂದು ಹೆಜ್ಜೆ ಮುಂದೆ ಹೋಗಿ ಕರಿದ ಹಸಿರು ಬಟಾಣಿಗಳ ಸ್ಯಾಂಪಲ್ ಕೂಡ ಆಹಾರ ಸುರಕ್ಷತೆ & ಔಷಧ ಆಡಳಿತ ಇಲಾಖೆ ಕಲೆ ಹಾಕಿದೆ.
ಇನ್ನೂ ಕರಿದ ಹಸಿರು ಬಟಾಣಿ ಬ್ಯಾನ್ ಆಗುವ ಸುದ್ದಿ ಮಧ್ಯೆಯೇ ಒಂದೊಮ್ಮೆ ಬಟಾಣಿಗೆ ಕಲರ್ ಬಳಕೆ ಮಾಡಿದ್ರೆ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತದೆ ಅನ್ನೋದನ್ನ ತಜ್ಞ ವೈದ್ಯರು ತಿಳಿಸಿದ್ದಾರೆ. ಅತೀ ಕಡಿಮೆ ಬೆಲೆಗೆ ಚಿಕ್ಕ ವಯಸ್ಸಿನಿಂದ ಹಿಡಿದು ವೃದ್ಧರವರೆಗೆ ಕೂಡ ಫೇವರೆಟ್ ಆಗಿರೋ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಒಳಗೊಂಡಿರುವ ಶಂಕೆ ಶುರುವಾಗಿದೆ. ಈ ಕರಿದ ಹಸಿರು ಬಟಾಣಿಯಲ್ಲಿ ಯತೇಚ್ಛವಾಗಿ ಕೃತಕ ಬಣ್ಣ ಬಳಕೆ ಮಾಡುವ ಗಂಭೀರ ಆರೋಪ ಇದ್ದು, ಈ ರೀತಿ ಕಲರ್ ಹಾಕೋದ್ರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರತಿಕೂಲ ಪರಿಣಾಮ ಬೀರುತ್ತದೆ ಅನ್ನೋದು ತಜ್ಞ ವೈದ್ಯರ ಮಾತು. ಕ್ಯಾನ್ಸರ್ ಬಾಧಿಸುವ ಸಾಧ್ಯತೆ ಇದೆ ಎಚ್ಚರ ಎಂದಿದ್ದಾರೆ.
ಒಟ್ಟಿನಲ್ಲಿ ಸಾರ್ವಜನಿಕರ ಕೂಗಿಗೆ ಕಿವಿಗೊಟ್ಟು CM ವಿಶೇಷ ಕರ್ತವ್ಯಾಧಿಕಾರಿ ಸೂಚನೆ ಮೇರೆಗೆ ಆಹಾರ ಸುರಕ್ಷತೆ & ಆಡಳಿತ ಇಲಾಖೆ ಕರಿದ ಬಟಾಣಿ ವಿಚಾರದಲ್ಲಿ ಕಾರ್ಯ ಪ್ರವತ್ತರಾಗಿದ್ದು ಒಂದು ವೇಳೆ ಕಲರ್ ಮಿಶ್ರಣ ಮಾಡಿದ್ರೆ ಕೃತಕ ಬಣ್ಣಕ್ಕೆ ಕಡಿವಾಣ ಹಾಕಲೇಬೇಕು ಅನ್ನೋದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯ.