ಬೆಳಗಾವಿ:- ಪ್ರಧಾನಿ ಹುದ್ದೆಯಿಂದ ಮೋದಿ ಇಳಿಸಿ, ಗಡ್ಕರಿ ಕೂರಿಸಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಮೋದಿಯವರನ್ನು (ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪ್ರಧಾನಿಯಾಗಬೇಕು.
ಓವರ್ ಟೇಕ್ ಮಾಡುವ ಭರದಲ್ಲಿ ಟ್ಯಾಂಕರ್ ಗೆ ಕಾರು ಡಿಕ್ಕಿ: ಇಬ್ಬರು ದುರ್ಮರಣ!
ಪ್ರಧಾನಿಯನ್ನ ಕೆಳಗಿಳಿಸಿ ಬೇರೆಯವರನ್ನು ಪ್ರಧಾನಿ ಮಾಡಿದರೆ ಒಳ್ಳೆಯ ಕೆಲಸ ಮಾಡುತ್ತಾರೆ. ನನಗೆ ಇರುವ ಮಾಹಿತಿ ಪ್ರಕಾರ ಪ್ರಧಾನಿ ಬದಲಾಗುತ್ತಾರೆ. ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪೈಕಿ ಒಬ್ಬರು ಪ್ರಧಾನಿಯಾಗುತ್ತಾರೆ ಎಂದರು. ನಾನು ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಮೋದಿಯನ್ನು ಕೆಳಗಿಸಿ ಬೇರೆಯವರನ್ನು ಪ್ರಧಾನಮಂತ್ರಿ ಮಾಡಬೇಕು. ನಿತಿನ್ ಗಡ್ಕರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪ್ರಧಾನಿಯನ್ನಾಗಿ ಮಾಡಿ ನಾನೇ ಬುದ್ಧಿವಂತ, ವಿಶ್ವ ಗುರು ಅಂತಾ ಬಿಜೆಪಿಯವರು ಹೇಳಿದ್ರೆ ಹೇಗೆ ಎಂದು ಪ್ರಶ್ನಿಸಿದರು.