ಶಿವಮೊಗ್ಗ : ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಭಾರತಾಂಬೆಯ ಹೆಸರನ್ನಿಟ್ಟುಕೊಂಡು ಬಿಜೆಪಿಯವರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಈ ಹಿಂದೆ ಭಾರತ್ ಅಕ್ಕಿಯನ್ನು ಕೊಡುವ ಕೆಲಸ ಮಾಡಿದ್ದರು. ಅದು ಇದುವರೆಗೆ ಎಷ್ಟು ಮನೆಗೆ ತಲುಪಿದೆ ಎಂಬುದು ತಿಳಿದಿದಲ್ಲ. ಸಂಸದರ ಚುನಾವಣೆ ಸಂದರ್ಭದಲ್ಲಿ ಜನರಿಗೆ ಮೋಸ ಮಾಡಲು ಬಿಜೆಪಿ ಭಾರತ್ ಅಕ್ಕಿಯನ್ನು ಘೋಷಣೆ ಮಾಡಿತು. ಆದರೆ ಅದನ್ನು ಮನೆಮನೆಗೆ ತಲುಪಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಮನೆ,
Watermelon Seeds: ಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್..!
ಮನೆಗೆ ತಲುಪಿಸಿರುವ ತೃಪ್ತಿ ನಮಗಿದೆ ಎಂದರು. ಸಚಿವ ರಾಜಣ್ಣ ಬಗ್ಗೆ ನನ್ನ ಬಳಿ ಕೇಳಬೇಡಿ ಎಂದರು. ಇನ್ನು ಭದ್ರಾವತಿ ಪ್ರಕರಣದ ಬಗ್ಗೆ ಮಾತನಾಡಿ ಭದ್ರಾವತಿ ಪ್ರಕರಣದ ಬಗ್ಗೆ ಕ್ರಮ ತಗೆದುಕೊಳ್ಳಿ ಅಂತಾ ಅಧಿಕಾರಿಗಳಿಗೆ ಹೇಳಿದ್ದೀನಿ, ಈಗಾಗಲೇ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಷ್ಟೇ, ಆ ಹಿನ್ನೆಲೆ ತೆಗೆದುಕೊಳ್ಳುತ್ತೇವೆ ಎಂದರು.