ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಮದ್ದು ಎರೆದಿದ್ದೇ ಮೆಟ್ರೋ. ಬೇಗ ಬೇಗ ಆಫೀಸ್, ಕಾಲೇಜಿಗೆ ಹೋಗಬೇಕೆಂದವರು ಮೆಟ್ರೋ ಹತ್ತಿದ್ರು. ಮಳೆ, ಚಳಿ, ಬಿಸಿಲು ಹಾಗೂ ಟ್ರಾಫಿಕ್ ಕಿರಿಕಿರಿ ಇಲ್ಲದೇ ನಮ್ಮ ಮೆಟ್ರೋನಲ್ಲಿ ಆರಾಮದಾಯಕ ಪ್ರಯಾಣ ಮಾಡುತ್ತಿದ್ದರು. ಆದ್ರೆ, ದರ ಏರಿಕೆ ಬರೆ ಎಳೆದುಬಿಟ್ಟಿದೆ. ಇದರ ನಡುವೆ ರಾಜ್ಯ ರಾಜಧಾನಿಯ ನಾಗರಿಕರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ.
ಹೌದು ನಗರದ ಬಹು ನಿರೀಕ್ಷಿತ ಪಿಂಕ್ ಮೆಟ್ರೋ ಈ ವರ್ಷ ಅಥವಾ ಬರೋ ವರ್ಷ ಓಪನ್ ಆಗಲಿದೆ. ಪಿಂಕ್ ಮಾರ್ಗದ ಗೊಟ್ಟಿಗೆರೆ ಟು ನಾಗವಾರ 21 ಕಿಮೀ ವಿಸ್ತೀರ್ಣದಲ್ಲಿರುವ ಮಾರ್ಗ. ಅಂಡರ್ ಗ್ರೌಂಡ್ನಲ್ಲಿ 13 ಕಿಮೀ ಒಳಗೆ ಮೆಟ್ರೋ ರೈಲು ಸಂಚಾರ ಮಾಡಲಿದ್ದು, ಈ ಮಾರ್ಗದಲ್ಲಿ ಒಟ್ಟು-18 ಮೆಟ್ರೋ ಸ್ಟೇಷನ್ಗಳಿವೆ.
Watermelon Seeds: ಕಲ್ಲಂಗಡಿ ಬೀಜ ಹೀಗೆ ಸೇವಿಸಿದರೆ ಕೂಡಲೇ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್..!
13ರಲ್ಲಿ 12 ಅಂಡರ್ ಗ್ರೌಂಡ್ ಸ್ಟೇಷನ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳಿವೆ. ಅಂದಾಜು 12 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಾರ್ಗದಲ್ಲಿ 5 ಸಾವಿರ ಕೋಟಿಯಷ್ಟು ವೆಚ್ಚದಲ್ಲಿ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದೆ.
ಅಂಡರ್ ಗ್ರೌಂಡ್ ಮೆಟ್ರೋ ಕಾಮಗಾರಿಗಾಗಿ 9 ಟಿಬಿಎಂ ಮೆಷಿನ್ಗಳನ್ನು ಭೂಮಿಗಿಳಿಸಲಾಗಿತ್ತು. ಅದರಲ್ಲಿ ಈಗಾಗಲೇ 9 ಟಿಬಿಎಂಗಳು ಮೆಷಿನ್ ಸುರಂಗ ಕೊರೆದು ಹೊರಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಅಧಿಕಾರಿಗಳು ಸುರಂಗ ಪರಿಶೀಲನೆ ಮಾಡಿದ್ದಾರೆ. ಈ ಹಿಂದೆ ಗ್ರೀನ್ ಮತ್ತು ಪರ್ಪಲ್ ಲೈನ್ ನಲ್ಲಿ ಆರು ಟಿಬಿಎಂ ಮೆಷಿನ್ಗಳನ್ನು ಸುರಂಗ ಕೊರೆಯಲು ಭೂಮಿಗೆ ಇಳಿಸಲಾಗಿತ್ತು.
ಪಿಂಕ್ ಲೈನ್ನಲ್ಲಿ ಒಟ್ಟು 9 ಟಿಬಿಎಂ ಮೆಷಿನ್ ಗಳನ್ನು ನೆಲಕ್ಕೆ ಇಳಿಸಲಾಗಿದ್ದು, ಸದ್ಯ ಎಲ್ಲಾ TBM ಸುರಂಗ ಕೊರೆದು ಯಶಸ್ವಿಯಾಗಿ ಹೊರ ಬಂದಿದೆ ಅದಲ್ಲದೆ ಬರಿಗಣ್ಣಿಗೆ ಕಾಣದ್ದು ಸಿಸ್ಟಂ ಅಲ್ಲಿ ಗೊತ್ತಾಗುತ್ತೆ ಅದರ ಮೂಲಕ ಪರಿಹಾರ ಕಂಡು ಕೊಳ್ಳುತ್ತೇವೆ ಎಂದು ಮೆಟ್ರೋ ಅಧಿಕಾರಿ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.