ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಸುಮಾರು ೭ ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಜೈಲು ಸೇರುವ ಮುನ್ನ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಜೈಲಿನಲ್ಲಿದ್ದ ವೇಳೆ ಬೆನ್ನು ನೋವು ಹೆಚ್ಚಾದ ಹಿನ್ನೆಲೆ ಅದಕ್ಕಾಗಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಲಿನಿಂದ ಹೊರ ಬಂದು ಎರಡು ತಿಂಗಳಾಗುತ್ತ ಬಂದಿದ್ದು ಇದೀಗ ದರ್ಶನ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ, ಈ ಮಧ್ಯೆ ದರ್ಶನ್ ಜೈಲಿಗೆ ಹೋಗುವ ಮುಂಚೆ ಒಪ್ಪಂದ ಮಾಡಿಕೊಂಡಿದ್ದ ಇನ್ನೊಂದು ಸಿನಿಮಾದ ಬಗ್ಗೆಯೂ ಅಪ್ಡೇಟ್ ಸಿಕ್ಕಿದೆ.
‘ಡೆವಿಲ್’ ಸಿನಿಮಾದ ಚಿತ್ರೀಕರಣ ನಡೆಯುವಾಗಲೇ ದರ್ಶನ್, ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ದರ್ಶನ್ ಹಾಗೂ ಪ್ರೇಮ್ ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ ಬಂಡವಾಳ ಹೂಡಲಿದ್ದಾರೆ ಎಂಬುದು ಸಹ ಖಾತ್ರಿ ಆಗಿತ್ತು. ಅಸಲಿಗೆ ದರ್ಶನ್ ಹಾಗೂ ಪ್ರೇಮ್ ನಡುವೆ ‘ಪುಡಾಂಗ್’ ವಿಚಾರಕ್ಕೆ ಮನಸ್ಥಾಪ ಮೂಡಿತ್ತು, ರಕ್ಷಿತಾ ಪ್ರೇಮ್ ಸಂಧಾನದ ಕಾರಣ ಆ ಮನಸ್ಥಾಪ ಸರಿಹೋಗಿದ್ದು, ಮತ್ತೊಮ್ಮೆ ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.
ದರ್ಶನ್ ಜೈಲಿಗೆ ಹೋದ ಕಾರಣಕ್ಕೆ ಪ್ರೇಮ್ ನಿರ್ದೇಶನದ ಸಿನಿಮಾ ನಿಂತು ಹೋಗಿದೆ. ಅದಕ್ಕಾಗಿ ಪಡೆದ ಸಂಭಾವನ್ನೆಯನ್ನು ದರ್ಶನ್ ವಾಪಸ್ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಕೆವಿಎನ್ ಪ್ರೊಡಕ್ಷನ್ ನವರು ದರ್ಶನ್ ಸಿನಿಮಾದ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಪ್ರೇಮ್, ಶಿವರಾಜ್ ಕುಮಾರ್ ಜೊತೆಗೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದವು. ಆದರೆ ದರ್ಶನ್ ಹುಟ್ಟುಹಬ್ಬದಂದು ದರ್ಶನ್-ಪ್ರೇಮ್ ಸಿನಿಮಾ ಸುದ್ದಿಗಳಿಗೆ ಸ್ಪಷ್ಟನೆ ಸಿಕ್ಕಿದೆ.
ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಕೆವಿಎನ್ ಪ್ರೊಡಕ್ಷನ್ಸ್ನವರು ದರ್ಶನ್ ಹುಟ್ಟುಹಬ್ಬಕ್ಕೆ ಶುಭ ಕೋರಿ ಸಿನಿಮಾ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಪೋಸ್ಟರ್ನಲ್ಲಿ ಗಧೆಯ ಚಿತ್ರವಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಹಿಂದೆ ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ‘ಕರಿಯ’ ಸಿನಿಮಾ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಆ ಬಳಿಕ ಇಬ್ಬರ ನಡುವಿನ ಮನಸ್ಥಾಪಗಳಿಂದಾಗಿ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಇದೀಗ ಮತ್ತೆ ಈ ಜೋಡಿ ಒಂದಾಗಿದ್ದು ಕುತೂಹಲ ಮೂಡಿಸಿದೆ.