ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದ್ದು, ಏ.1 ರಿಂದ ಎಣ್ಣೆ ಬ್ಯಾನ್ ಮಾಡಲಾಗುತ್ತಿದೆ.
ಕಿರುತೆರೆ ನಟ ಚರಿತ್ ಬಾಲಪ್ಪ ವಿರುದ್ಧ ಮತ್ತೊಂದು ಲೈಗಿಂಕ ಕಿರುಕುಳ ಕೇಸ್ ದಾಖಲು!
ಹೌದು, ಮಧ್ಯಪ್ರದೇಶ ಸರ್ಕಾರ ರಾಜ್ಯದ 19 ಪವಿತ್ರ ಸ್ಥಳಗಳಲ್ಲಿ ಮದ್ಯ ನಿಷೇಧ ಮಾಡಲು ನಿರ್ಧರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಆದೇಶ ಜಾರಿಗೆ ಬರಲು ನಿರ್ಧರಿಸಲಾಗಿದೆ. ಆದ್ದರಿಂದ ಮಧ್ಯಪ್ರದೇಶದ ಈ ಸ್ಥಳಗಳಲ್ಲಿ ಏಪ್ರಿಲ್ 1 ರಿಂದ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ. ಇದಕ್ಕಾಗಿ ಈಗಾಗಲೇ ಅಧಿಸೂಚನೆಯನ್ನೂ ಹೊರಡಿಸಲಾಗಿದೆ.
ರಾಜ್ಯ ಮುಖ್ಯಮಂತ್ರಿ ಮೋಹನ್ ಯಾದವ್ ಇತ್ತೀಚೆಗೆ ಮಧ್ಯ ಪ್ರದೇಶದ 19 ಪವಿತ್ರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡುವುದಾಗಿ ಘೋಷಿಸಿದರು. ಈ ನಿರ್ಧಾರವನ್ನು ತಕ್ಷಣ ಜಾರಿಗೆ ತರಲು, ಶುಕ್ರವಾರ ರಾಜಭವನದಿಂದ ಅಧಿಸೂಚನೆಯನ್ನು ಸಹ ಹೊರಡಿಸಲಾಗಿದೆ. ಅದರಂತೆ, ರಾಜ್ಯದ 13 ನಗರ ಮತ್ತು 6 ಗ್ರಾಮೀಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮದ್ಯದಂಗಡಿಗಳು ಏಪ್ರಿಲ್ 1 ರಿಂದ ಮುಚ್ಚಲ್ಪಡುತ್ತವೆ ಎನ್ನಲಾಗಿದೆ
ರಾಜಭವನ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಉಜ್ಜಯಿನಿ ಮಹಾನಗರ ಪಾಲಿಕೆ, ಓಂಕಾರೇಶ್ವರ ನಗರ ಪಂಚಾಯತ್, ಮಹೇಶ್ವರ ನಗರ ಪಂಚಾಯತ್, ಮಂಡ್ಲೇಶ್ವರ ನಗರ ಪಂಚಾಯತ್, ಓರ್ಚಾ ನಗರ ಪಂಚಾಯತ್, ಮೈಹಾರ್ ಪುರಸಭೆ, ಚಿತ್ರಕೂಟ ನಗರ ಪಂಚಾಯತ್, ದಾಟಿಯಾ ಪುರಸಭೆ, ಪನ್ನಾ ಪುರಸಭೆ, ಮಂಡ್ಲಾ ಪುರಸಭೆ, ಮುಲ್ತಾಯಿ ಪುರಸಭೆ, ಮಂಡ್ಸೌರ್ ಪುರಸಭೆ, ಅಮರಕಾಂತಕ್ ನಗರ ಪಂಚಾಯತ್.
ಸಲ್ಕನ್ಪುರ್ ಗ್ರಾಮ ಪಂಚಾಯತ್, ಬರ್ಮನ್ ಕಲಾ ಗ್ರಾಮ ಪಂಚಾಯತ್, ಲಿಂಗ ಗ್ರಾಮ ಪಂಚಾಯತ್, ಬರ್ಮನ್ ಖುರ್ದ್ ಗ್ರಾಮ ಪಂಚಾಯತ್, ಕುಂದಲ್ಪುರ್ ಗ್ರಾಮ ಪಂಚಾಯತ್ ಮತ್ತು ಬಂದಕ್ಪುರ್ ಗ್ರಾಮ ಪಂಚಾಯತ್ ಸೇರಿದಂತೆ 19 ಪವಿತ್ರ ಪ್ರದೇಶಗಳಲ್ಲಿ ಇನ್ಮುಂದೆ ಮದ್ಯ ಮಾರಾಟ ನಿಷೇಧವಾಗಲಿದೆ ಎಂದು ವರದಿಯಾಗಿದೆ.