ಬೆಂಗಳೂರು: ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ರಾಜ್ಯ ಸರ್ಕಾರವೇ ಕಾರಣ ಎಂದು ಕೇಂದ್ರ ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೆಟ್ರೋ ಕುರಿತು ಎಲ್ಲಾ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರ ಇದೆ.
ದರ ಏರಿಕೆ ಪ್ರಸ್ತಾವನೆ ನೀಡಿದ್ದೇ ರಾಜ್ಯ ಸರ್ಕಾರ. ಮೆಟ್ರೋ ಸಂಬಂಧ ಎಲ್ಲ ವಿಚಾರಗಳಿಗೂ ರಾಜ್ಯ ಸರ್ಕಾರವೇ ಕಾರಣ. ಕೇಂದ್ರದಿಂದ ದರ ಏರಿಕೆಗೆ ಸೂಚನೆ ನೀಡಿಲ್ಲ. ಇದು ತಪ್ಪು ಆರೋಪ ಎಂದು ದೂರಿದರು.
Bank Job: ಬ್ಯಾಂಕ್ʼನಲ್ಲಿ ಕೆಲಸ ಮಾಡಲು ಬಯಸಿದವರಿಗೆ ಉದ್ಯೋಗಾವಕಾಶ! ಯಾವುದೇ ಲಿಖಿತ ಪರೀಕ್ಷೆ ಇಲ್ಲ
ಮೆಟ್ರೋ ಸಂಬಂಧಿತ ಎಲ್ಲಾ ಜವಾಬ್ದಾರಿಗಳೂ ರಾಜ್ಯ ಸರ್ಕಾರಕ್ಕೆ ಬರಲಿದೆ. ಮೆಟ್ರೋ ದರ ಏರಿಕೆ ಸಮಿತಿ ದೆಹಲ್ಲಿ ಇಲ್ಲ. ಕರ್ನಾಟಕದಲ್ಲಿ ಇದೆ. ನಾವು ದರ ಏರಿಕೆ ಮಾಡಿದ್ದೇವೆ ಅನ್ನೋದು ತಪ್ಪು ಎಂದು ಹೇಳಿದರು.
ಇದನ್ನೂ ಓದಿ: 100% ದರ ಏರಿಕೆಯಾದ ಕಡೆ ಕೇವಲ 10 ರೂ. ಇಳಿಕೆ – 50% ಹೇಳಿ 70% ಏರಿಸಿದ BMRCL ಹಿಂದೆ ಎಷ್ಟಿತ್ತು? ಈಗ ಎಷ್ಟು ಇಳಿಕೆ? ಇದು ಕರ್ನಾಟಕ ಮಾತ್ರ ಅಲ್ಲ. , ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈಗಳಲ್ಲೂ ಇದೇ ರೀತಿಯಾಗಿದೆ. ಮೆಟ್ರೋ ಯೋಜನೆಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಬರುತ್ತವೆ. ರಾಜ್ಯ ಸರ್ಕಾರಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ ಎಂದು ಹೇಳಿದರು.