ಬೆಂಗಳೂರು ಮೆಟ್ರೋ ಟಿಕೆಟ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಪ್ರಯಾಣಿಕರ ಸಂಖ್ಯೆ ಕೂಡ ಇಳಿಮುಖವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ BMRCL ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹತ್ವದ ಸಭೆಗಳನ್ನು ನಡೆಸಿದ BMRCL ಎಂ.ಡಿ ಮಹೇಶ್ವರ ರಾವ್ ಅವರು ದಿಢೀರ್ ಸುದ್ದಿಗೋಷ್ಠಿ ನಡೆಸಿ ಟಿಕೆಟ್ ದರ ಏರಿಕೆ ಹಾಗೂ ಗೊಂದಲಗಳ ಬಗ್ಗೆ ಮಾಹಿತಿ ನೀಡಿದ್ದರು.
ನಿಮಗೆ ಗೊತ್ತೆ..? ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಪಕ್ಕಾ ಹೆಲ್ಪ್ ಮಾಡುತ್ತೆ..!
ಇದೀಗ ಮೆಟ್ರೋ ದರ ಇಳಿಕೆಗೆ ನಿರ್ಧಾರ ಮಾಡಿರುವ ಬಿಎಂಆರ್ ಸಿಎಲ್ ಪರಿಷ್ಕೃತ ಟಿಕೆಟ್ ದರ ಜಾರಿ ಮಾಡಿದೆ. ನಮ್ಮ ಮೆಟ್ರೋ ಪ್ರಯಾಣ ದರ ಎಲ್ಲೆಲ್ಲಿ ದುಪ್ಪಟ್ಟು ಹೆಚ್ಚಾಗಿತ್ತೋ ಅಲ್ಲೆಲ್ಲ ತುಸು ಇಳಿಕೆ ಮಾಡಿದೆ. ಶುಕ್ರವಾರ ಬೆಳಗ್ಗೆ ಮೆಟ್ರೋದಲ್ಲಿ ಪ್ರಯಾಣಿಸಿದವರಿಗೆ ಹೊಸ ದರ ಅನ್ವಯ ಆಗಿದೆ. ಅಧಿಕೃತ ದರ ಪಟ್ಟಿ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.
ಯಾವ ಮಾರ್ಗದಲ್ಲಿ ಎಷ್ಟು ದರ ಇಳಿಕೆ?
ಮೆಜೆಸ್ಟಿಕ್ ನಿಂದ ರೇಷ್ಮೆಸಂಸ್ಥೆಗಿದ್ದ 70 ರೂ ಈಗ 60 ರೂ ಆಗಿದೆ
ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿಗೆ 60 ರೂ ಇದ್ದ ಬೆಲೆ 50 ರೂಗೆ ಇಳಿಕೆ
ಜಾಲಹಳ್ಳಿಯಿಂದ ರೇಷ್ಮೆಸಂಸ್ಥೆಗೆ 90 ರೂ ದರ ,ಇದರಲ್ಲಿ ಬದಲಾವಣೆ ಮಾಡಿಲ್ಲ
ಮೆಜೆಸ್ಟಿಕ್ ನಿಂದ- ವೈ್ಟ್ ಫೀಲ್ಡ್ ಗೆ 90 ರೂ ಇದ್ದ ದರ ಈಗ 80 ರೂ
ಮೆಜೆಸ್ಟಿಕ್ – ಚಲ್ಲಘಟ್ಟಕ್ಕೆ 70 ರೂ ಇದ್ದ ದರ ಈಗ 60 ರೂ
ಮೆಜೆಸ್ಟಿಕ್-ವಿಧಾನಸೌಧಕ್ಕೆ 20 ರೂನಿಂದ 10 ರೂಪಾಯಿಗೆ ಇಳಿಕೆ
ಮೆಜೆಸ್ಟಿಕ್ ನಿಂದ- ಕಬ್ಬನ್ ಪಾರ್ಕ್ ಗೆ ಇದ್ದ 20 ರೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.