ಸಾಮಾನ್ಯವಾಗಿ ಜನ ಮಾತನಾಡುವಾಗ ಶುಗರ್ ಇದೆ ಅಂದಾಕ್ಷಣ ಅನ್ನ ಬಿಟ್ಟು ಬಿಡಿ. ಮುದ್ದೆ ತಿನ್ನಿ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಅಂತ ಹೇಳುವುದನ್ನು ಕೇಳಿರುತ್ತೀರಿ.
ಮಧುಮೇಹ ಇರುವವರಿಗೆ ಅಕ್ಕಿ ಒಳ್ಳೇಯದಾ, ಗೋಧಿ ಒಳ್ಳೇಯದಾ, ರಾಗಿ ತಿನ್ನಬಹುದಾ? ಯಾಕಂದ್ರೆ ಮಧುಮೇಹ ಬಂದ ಬಹುತೇಕ ಮಂದಿ ಅನ್ನ ಬಿಟ್ಟು, ಚಪಾತಿ ಅಥವಾ ರಾಗಿ ಮುದ್ದೆ ತಿನ್ನಲು ಆರಂಭಿಸುತ್ತಾರೆ.
ಅಕ್ಕಿ, ರಾಗಿ, ಗೋಧಿ, ಜೋಳ, ಸಿರಿಧಾನ್ಯಗಳು ಎಲ್ಲವೂ ಕಾರ್ಬೋಹೈಡ್ರೇಟ್ಗಳೇ. ಅಂದರೆ ಇವುಗಳನ್ನು ಅತಿಯಾಗಿ ಸೇವಿಸಿದರೆ ಮಧುಮೇಹ ಹೆಚ್ಚಳವಾಗುವುದರಲ್ಲಿ ಎರಡು ಮಾತಿಲ್ಲ.
ಮಧುಮೇಹ ನಿಯಂತ್ರಣಕ್ಕೆ ನಾವು ಯಾವುದೇ ರೀತಿಯ ಔಷಧಿ ತೆಗೆದುಕೊಂಡರೂ, ಇದರಿಂದ ಉತ್ತಮ ಫಲಿತಾಂಶ ಸಿಗುತ್ತಿಲ್ಲ ಎಂದು ಅನೇಕ ಮಂದಿ ದೂರುತ್ತಾರೆ.
ಹೌದು, ಮಧುಮೇಹಕ್ಕೆ ಔಷಧಿ ತೆಗೆದುಕೊಳ್ಳುವುದರಿಂದ ನಿಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣವೇ ನಿಯಂತ್ರಿಸಬಹುದು, ಆದರೆ ಸೂಕ್ತವಾದ ಆಹಾರ ಕ್ರಮ ಅನುಸರಿಸದಿದ್ದರೆ ಅಥವಾ ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಆಗುತ್ತಲೇ ಇರುತ್ತದೆ. ಆದರೆ ಮಧುಮೇಹವನ್ನು ಸಂಪೂರ್ಣವಾಗಿ ನಿಯಂತ್ರಿಸಲು ನೀವು ಬಯಸುವುದಾದರೆ, ಆಯುರ್ವೇದದಲ್ಲಿ ತಿಳಿಸಲಾದ ಕೆಲವು ಟಿಪ್ಸ್ಗಳನ್ನು ಫಾಲೋ ಮಾಡಬಹುದಾಗಿದೆ.
ಇಂಗ್ಲಿಷ್ನಲ್ಲಿ ಜೈಂಟ್ ಕ್ಯಾಲೋಟ್ರೋಪ್ ಎಂದು ಕರೆಯಲ್ಪಡುವ ಈ ಗಿಡವನ್ನು ಕನ್ನಡದಲ್ಲಿ ಎಕ್ಕದ ಗಿಡ ಎಂದು ಕರೆಯಲಾಗುತ್ತದೆ. ಈ ಗಿಡದ ಎಲೆಗಳು ತುಂಬಾ ಮೃದುವಾಗಿರುತ್ತವೆ. ಈ ಎಲೆಯ ಬಣ್ಣ ತಿಳಿ ಹಸಿರಾಗಿದ್ದು, ಇದು ಒಣಗಿದಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ.
ಮಧುಮೇಹದಿಂದ ಬಳಲುತ್ತಿರುವವರಿಗೆ, ಎಕ್ಕದ ಗಿಡ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾದ ಮಟ್ಟದಲ್ಲಿ ಕಾಪಾಡಿಕೊಳ್ಳುವ ಮೂಲಕ ದೇಹವನ್ನು ಆರೋಗ್ಯವಾಗಿರಿಸುತ್ತದೆ.
ಎಕ್ಕದ ಗಿಡದ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು 10 ಮಿ.ಲೀ. ನೀರಿನೊಂದಿಗೆ ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ನಿಮ್ಮ ಪಾದಗಳಿಗೆ ಹಚ್ಚಿಕೊಳ್ಳುವುದು ದೇಹಕ್ಕೆ ಒಳ್ಳೆಯದು. ಇಲ್ಲದಿದ್ದರೆ, ರಾತ್ರಿ ಮಲಗುವಾಗ ಸಾಕ್ಸ್ ಧರಿಸಿ ಎಕ್ಕದ ಗಿಡದ ಎಲೆಗಳನ್ನು ಪಾದಗಳಿಗೆ ಹಚ್ಚಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಸಾಕ್ಸ್ನಲ್ಲಿ ಸ್ವಲ್ಪ ಶುಂಠಿಯನ್ನು ಹಾಕಿಕೊಂಡು ಮಲಗುವುದು ಸಹ ಒಳ್ಳೆಯದು
ಮಧುಮೇಹಿಗಳು ಈ ಸಾಕ್ಸ್ಗಳನ್ನು ರಾತ್ರಿಯಿಡೀ ಧರಿಸಿ ಬೆಳಗ್ಗೆ ಎದ್ದಾಗ ಅವುಗಳನ್ನು ತೆಗೆದು ಹಾಕುವುದು ತುಂಬಾ ಒಳ್ಳೆಯದು. ಮಧುಮೇಹಕ್ಕೆ ಮಾತ್ರವಲ್ಲದೇ, ಮಲಬದ್ಧತೆ ಸೇರಿದಂತೆ ಹಲವು ಸಮಸ್ಯೆಗಳಿಗೂ ಎಕ್ಕದ ಗಿಡದ ಎಲೆಗಳನ್ನು ಚಿಕಿತ್ಸೆ ನೀಡಲು ಬಳಸಬಹುದು. ಈ ಎಕ್ಕದ ಗಿಡದ ಎಲೆಗಳು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಹೊಟ್ಟೆ ನೋವನ್ನು ಸುಲಭವಾಗಿ ಗುಣಪಡಿಸಬಹುದು. ಎಕ್ಕದ ಗಿಡದ ಎಲೆಗಳಿಂದ ಬಿಳಿ ಹಾಲಿನಂತಹ ದ್ರವ ಹೊರಹೊಮ್ಮುತ್ತದೆ. ಆಕಸ್ಮಿಕವಾಗಿಯೂ ಇದು ನಿಮ್ಮ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸಿ. ಈ ಕಹಿ ಎಲೆಗಳನ್ನು ಬಳಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು.