ಹುಬ್ಬಳ್ಳಿ; ಟೊಯೋಟಾ ಡೀಲರ್ ಆದ ಶೋಧಾ ಟೊಯೋಟಾದಲ್ಲಿ ಹೊಸ ಕ್ಯಾಮ್ರಿ ಕಾರನ್ನು ಬಿಡುಗಡೆ ಮಾಡಲಾಯಿತು. ಉತ್ತರ ಕರ್ನಾಟಕದ ಮಾರುಕಟ್ಟೆಗೆ ಉದ್ಯಮಿಗಳಾದ ಜಯಕುಮಾರ ಅಳಗುಂಡಿ ಮತ್ತು ಶ್ರೀಮತಿ ಶ್ವೇತಾ ಅಳಗುಂಡಿ ಈ ನೂತನ ಕಾರನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಟೊಯೋಟಾದ ಈ ಕಾರು ಬೇರೆ ಎಲ್ಲಾ ಕಂಪನಿ ಕಾರುಗಳಿಗಿಂತ ಅತ್ಯುತ್ತಮವಾಗಿದೆ, ಶೋಧಾ ಟೊಯೋಟಾದ ಸರ್ವಿಸ್ ಕರ್ನಾಟಕದಲ್ಲಿಯೂ ಅತ್ಯುತ್ತಮವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಬಿ.ಐ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರಾದ ಮೋಹನ ಪಾಟೀಲ, ಶೋಧಾ ಟೊಯೋಟಾದ ಸಿಓಓ ರಘು ನಾಯ್ಕ, ಸಿಇಓ ಗೋವಿಂದ ಗೋವಣ್ಣವರ, ಆನಂದ, ಜಗದೀಶ, ಪ್ರಶಾಂತ್, ರಾಘವೇಂದ್ರ ಆಚಾರ್ಯ, ರಾಜೇಶ್ ನೀಲಕಣಿ, ಹಾಗೂ ಗ್ರಾಹಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.