ಮಂಡ್ಯ : ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಕೆಸ್ತೂರಿನಲ್ಲಿ ನಡೆದಿದೆ. ಮಾಚಳ್ಳಿ ಗ್ರಾಮದ ದಿವ್ಯ ಎಂ.ಜೆ. ಮೃತ ಗೃಹಿಣಿ. ಕಳೆದ 2016ರಲ್ಲಿ ದಿವ್ಯ ಕೆಸ್ತೂರಿನ ಗಿರೀಶ್ ನನ್ನ ಮದುವೆಯಾಗಿದ್ದು, ದಂಪತಿಗಳು ಜಿಮ್ ನಡೆಸುತ್ತಿದ್ದರು. ಜಿಮ್ನಲ್ಲಿ ಅನುಮಾನಾಸ್ಪದ ರೀತಿ ದಿವ್ಯ ಶವ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ರೌಡಿ ಆಸಾಮಿಯ ಅಟ್ಟಹಾಸ: ಸಿಕ್ಕ ಸಿಕ್ಕವರಿಗೆ ಚಾಕು ಇರಿತ!
ಇತ್ತೀಚೆಗೆ ಬೇರೊಂದು ಮಹಿಳೆ ಜೊತೆ ಪತಿ ಗಿರೀಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ದಿವ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ 3 ತಿಂಗಳ ಹಿಂದೆ ನ್ಯಾಯ ಪಂಚಾಯ್ತಿ ಕೂಡ ನಡೆದಿತ್ತು. ನ್ಯಾಯ ಪಂಚಾಯ್ತಿ ಬಳಿಕ ಮತ್ತೆ ಗಂಡನ ಹೆಂಡತಿ ಚೆನ್ನಾಗಿದ್ದರು. ಅದರೆ ಇಂದು ನೇಣು ಬಿಗದ ಸ್ಥಿತಿಯಲ್ಲಿ ದಿವ್ಯ ಮೃತ ದೇಹ ಪತ್ತೆಯಾಗಿದೆ. ದಿವ್ಯ ಕುಟುಂಬಸ್ಥರು ಗಂಡ ಗಿರೀಶನೇ ಹೊಡೆದು ಕೊಂದಿರುವುದೆಂದು ಆರೋಪಿಸಿದ್ದಾರೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.