ಬೆಂಗಳೂರು:- ನನ್ನ ಪ್ರಕಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ಗೆ ಕಾಮನ್ ಸೆನ್ಸ್ ಇಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಆಕ್ರೋಶ ಹೊರ ಹಾಕಿದ್ದಾರೆ.
ಡಾಬಾ ಬಂತು ಊಟ ಮಾಡ್ತೀಯಾ ಎಂದ ತಕ್ಷಣ ಉಸಿರಾಡಿದ ಹೆಣ: ಬೆಚ್ಚಿಬಿದ್ದ ಸಂಬಂಧಿಕರು!
ಈ ಸಂಬಂಧ ಮಾತನಾಡಿದ ಅವರು, ರಾಜ್ಯಗಳು ಹೆಚ್ಚಿನ ತೆರಿಗೆ ಕೇಳೋದು ಸಣ್ಣತನ ಎಂಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿಕೆಯೇ ಸಣ್ಣತನ. ರಾಜ್ಯಗಳು ಹೆಚ್ಚು ತೆರಿಗೆ ಕೇಳಬಾರದು ಎನ್ನುವ ಪಿಯೂಷ್ ಗೋಯಲ್ ಹೇಳಿಕೆಯೇ ಸಣ್ಣತನ. ಪಿಯೂಷ್ ಗೋಯಲ್ಗೆ ಕಾಮನ್ ಸೆನ್ಸ್ ಇಲ್ಲದೇ ಇರುವುದರಿಂದ ಹಾಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ರಾಜ್ಯ ಇಷ್ಟು ತೆರಿಗೆ ಕಟ್ಟಿ ನಮ್ಮ ರಾಜ್ಯದ ಅಭಿವೃದ್ಧಿಗೆ ಹಣ ಕೊಡೋದಿಲ್ಲ. ಹೆಚ್ಚು ಕೇಳೋದು ಸರಿಯಲ್ಲ ಅನ್ನೋದು ಸರಿಯಲ್ಲ. ಹೆಚ್ಚು ಪಾಲು ಕೊಡಿ ಅಂತ ಕೇಳೋದು ತಪ್ಪಲ್ಲ. ಪಿಯೂಷ್ ಗೋಯಲ್ ಕರ್ನಾಟಕದವರು ಆಗಿದ್ದರೆ ಏನು ಮಾಡುತ್ತಿದ್ದರು? ಇದೇ ರೀತಿ ಹೇಳ್ತಿದ್ರಾ? ಹಾಗಾದ್ರೆ ನಾವು ಹೆಚ್ಚು ತೆರಿಗೆ ಕಟ್ಟೋದು ತಪ್ಪಾ ಎಂದು ಪ್ರಶ್ನಸಿದರು